ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಮುನ್ನಡೆ 28,820 ಮತಗಳಿಗೆ ಏರಿಕೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ (JKNC) ನ ಮಾಜಿ ಸಿಎಂ ಉಮರ್ ಅಬ್ದುಲ್ಲಾ ಅವರು ಬಾರಾಮುಲ್ಲಾ ಕ್ಷೇತ್ರದಲ್ಲಿ 88619 ಮತಗಳಿಂದ ಹಿನ್ನಡೆಯಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಶೀದ್ ಶೇಖ್ 88619 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕೋಲಾರ: ಬಿಜೆಪಿಗೆ ಗೆಲುವು
ಕೋಲಾರ: ಬಿಜೆಪಿಗೆ ಗೆಲುವು
ಕೋಲಾರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ. ಮೈತ್ರಿ ಕೂಟದ ಅಭ್ಯರ್ಥಿ ಜೆಡಿಎಸ್ ಪಕ್ಷದ ಮಲ್ಲೇಶ್ ಬಾಬು 6.79 ಲಕ್ಷ ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ.
ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಕೆ.ವಿ.ಗೌತಮ್ ವಿರುದ್ಧ 68 ಸಾವಿರ ಮತಗಳ ಗೆಲುವು ಸಾಧಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ವಿರುದ್ಧ ರಕ್ಷಾ ರಾಮಯ್ಯಗೆ ಸೋಲು
ಚಿತ್ರದುರ್ಗದಲ್ಲಿ ಬಿ.ಎನ್.ಚಂದ್ರಪ್ಪ ವಿರುದ್ಧ ಗೋವಿಂದ ಕಾರಜೋಳಗೆ ಗೆಲುವು
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಮೇಶ ಜಿಗಜಿಣಗಿ 228322 ಮತಗಳನ್ನು ಗಳಿಸಿದರೆ, ರಾಜು ಅಲಗೂರ 188541 ಮತಗಳನ್ನು ಗಳಿಸಿದ್ದಾರೆ. ಜಿಗಜಿಣಗಿ 39781 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಒಡಿಶಾ ವಿಧಾನ ಸಭಾ ಚುನಾವಣೆ | ಸರಳ ಬಹುಮತದತ್ತ ಬಿಜೆಪಿ. 75 ಕ್ಷೇತ್ರಗಳಲ್ಲಿ ಮುನ್ನಡೆ
ಕಲುಬುರಗಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ವಿರುದ್ಧ 22,264 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆಲುವು
ಬೀದರ್ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ 1 ಲಕ್ಷ ಮತಗಳ ಭಾರೀ ಮುನ್ನಡೆ
ರಾಜ್ಯ ಸಚಿವ ಈಶ್ವರ ಖಂಡ್ರೆಯವರ ಪುತ್ರರಾಗಿರುವ ಸಾಗರ್ ಖಂಡ್ರೆ 419900 ಮತಗಳನ್ನು ಗಳಿಸಿದ್ದರೆ, ಹಾಲಿ ಸಂಸದ ಮತ್ತು ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ 318742 ಮತಗಳನ್ನು ಗಳಿಸಿದ್ದಾರೆ.
ಸಾಗರ್ ಖಂಡ್ರೆಯ ಮುನ್ನಡೆ 101158 ಮತಗಳಿಗೆ ಏರಿಕೆಯಾಗಿದೆ.