ತೆಲಂಗಾಣ | ಬ್ಯಾಂಕ್‌ನಿಂದ 13 ಕೋಟಿ ರೂ. ಮೌಲ್ಯದ 13 ಕಿಲೋ ಚಿನ್ನಾಭರಣ ಕಳವು

Update: 2024-11-20 16:00 GMT

ಸಾಂದರ್ಭಿಕ ಚಿತ್ರ

Fಹೈದರಾಬಾದ್: ತೆಲಂಗಾಣದ ವಾರಂಗಲ್ ಜಿಲ್ಲೆಯ ಸಾರ್ವಜನಿಕ ವಲಯದ ಬ್ಯಾಂಕ್ ಒಂದರಿಂದ 13.6 ಕೋಟಿ ರೂ. ಮೌಲ್ಯದ 19 ಕಿ.ಗ್ರಾಂ. ಚಿನ್ನಾಭರಣಗಳನ್ನು ಕಳವುಗೈಯಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬ್ಯಾಂಕ್‌ನ ರಾಯಪರ್ತಿ ಮಂಡಲದಲ್ಲಿರುವ ಶಾಖೆಯ ಕಿಟಕಿಯನ್ನು ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಕತ್ತರಿಸಿ ಒಳನುಗ್ಗಿದ್ದಾರೆ ಹಾಗೂ ಮುಖ್ಯ ಖಜಾನೆಯಿಂದ 19.5 ಕಿ.ಗ್ರಾಂ. ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್‌ನಿಂದ ಕಳವುಗೈದಿರುವುದು ಮಂಗಳವಾರ ಸಿಬ್ಬಂದಿಯ ಗಮನಕ್ಕೆ ಬಂತು. ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರನ್ನು ಸೆರೆ ಹಿಡಿಯಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ತನಿಖೆ ಮುಂದುವರಿದಿದೆ.

ಸಿಸಿಟಿವಿ ಕ್ಯಾಮೆರಾ ಹಾನಿಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳ್ಳರು ಬ್ಯಾಂಕ್‌ನಿಂದ ಡಿಜಿಟಲ್ ರೆಕಾರ್ಡರ್ (ಡಿವಿಆರ್) ಅನ್ನು ಕೂಡ ಕೊಂಡೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News