ಹರ್ಯಾಣ | ಹೋಟೆಲ್ ಪಾರ್ಕಿಂಗ್ ನಲ್ಲಿ ಮಹಿಳೆ ಸಹಿತ ಮೂವರ ಗುಂಡಿಕ್ಕಿ ಹತ್ಯೆ

Update: 2024-12-23 09:42 GMT

Screengrab: PTI

ಚಂಡೀಗಢ: ಅಪರಿಚಿತ ಹಂತಕರು ಮಹಿಳೆ ಸೇರಿದಂತೆ ಮೂವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಹರ್ಯಾಣದ ಪಂಚಕುಲದಲ್ಲಿನ ಹೋಟೆಲ್ ಪಾರ್ಕಿಂಗ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ದಿಲ್ಲಿಯ ವಿಕ್ಕಿ ಮತ್ತು ವಿಪಿನ್ ಹಾಗೂ ಹಿಸ್ಸಾರ್ ನ ನಿಯಾ ಎಂದು ಗುರುತಿಸಲಾಗಿದೆ ಎಂದು ಪಿಂಜೋರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೋಮ್ ಬೀರ್ ತಿಳಿಸಿದ್ದಾರೆ.

ಹೋಟೆಲ್ ಪಾರ್ಕಿಂಗ್ ತಾಣದಲ್ಲಿ ಈ ಮೂವರನ್ನು ಅಪರಿಚಿತ ಹಂತಕರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕುರಿತು ಫೋನ್ ಕರೆಯ ಮೂಲಕ PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಪಂಚಕುಲದ ಸಹಾಯಕ ಪೊಲೀಸ್ ಆಯುಕ್ತ (ಅಪರಾಧ) ಅರವಿಂದ್ ಕಾಂಬೋಜ್, “ಮೂವರೂ ಜನ್ಮದಿನದ ಔತಣ ಕೂಟವೊಂದರಲ್ಲಿ ಭಾಗವಹಿಸಲು  ಆಗಮಿಸಿದ್ದರು” ಎಂದು ತಿಳಿಸಿದ್ದಾರೆ.

ಸುಮಾರು 30 ವರ್ಷದ ವಿಕ್ಕಿಗೆ ಅಪರಾಧ ಹಿನ್ನೆಲೆಯಿದ್ದು, ಆತ ಕೆಲವು ಪ್ರಕರಣಗಳನ್ನು ಎದುರಿಸಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

“ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಇನ್ನಿತರ ಸುಳಿವನ್ನು ಕಲೆ ಹಾಕುತ್ತಿದ್ದೇವೆ” ಎಂದೂ ಅವರು ಹೇಳಿದ್ದಾರೆ.

ಹತ್ಯೆಗೆ ಕಾರಣವೇನೆಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಈ ಹಗೆತನದ ಕಾರಣವೂ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News