ಕೆನಡಾ ಮೂಲದ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ನ ಪಂಜಾಬ್ ಆಸ್ತಿ ವಶಪಡಿಸಿಕೊಂಡ ಎನ್ಐಎ

Update: 2023-09-23 08:30 GMT

Photo: Twitter@NDTV

ಹೊಸದಿಲ್ಲಿ: ಕೆನಡಾ ಮೂಲದ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹಾಗೂ ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಸೇರಿರುವ ಪಂಜಾಬ್ ನ ಚಂಡೀಗಢದಲ್ಲಿರುವ ಆತನ ಮನೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಇಂದು ವಶಪಡಿಸಿಕೊಂಡಿದೆ

ಅಮೃತಸರದಲ್ಲಿ ಆತನ ಒಡೆತನದ ಭೂಮಿಯನ್ನು ವಶಪಡಿಸಿಕೊಂಡಿದೆ.

ಪನ್ನೂನ್ ಪಂಜಾಬ್ ನಲ್ಲಿ ಮೂರು ದೇಶದ್ರೋಹ ಸೇರಿದಂತೆ 22 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.

ಗೃಹ ಸಚಿವಾಲಯವು ಜುಲೈ 2020 ರಲ್ಲಿ ಪನ್ನುನ್ ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು ಹಾಗು ಆತನಿಗೆ ಇಂಟರ್ಪೋಲ್ ರೆಡ್ ನೋಟಿಸ್ ಗೆ ವಿನಂತಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News