ಉತ್ತರ ಭಾರತದಲ್ಲಿ 11 ವರ್ಷಗಳಲ್ಲೇ ಅತ್ಯುತ್ತಮ ಮಳೆ
ಹೊಸದಿಲ್ಲಿ: ಉತ್ತರ ಭಾರತ ಈ ವರ್ಷ 11 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯನ್ನು ಅನುಭವಿಸಿದೆ. ಪ್ರತಿ ವರ್ಷ ದೊಡ್ಡ ಪ್ರಮಾಣದ ಅನಾವೃಷ್ಟಿ ಅನುಭವಿಸುವ ಮೂಲಕ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುವ ಪರಿಸ್ಥಿತಿ ಇದ್ದು, ಈ ಬಾರಿ ಜೂನ್ 1 ರಿಂದ ಸೆಪ್ಟೆಂಬರ್ 29ರ ಅವಧಿಯಲ್ಲಿ 628 ಮಿಲಿಮೀಟರ್ ಮಳೆ ಬಿದ್ದಿದೆ. ಇದು 2013ರ ಬಳಿಕ ಬಿದ್ದ ಗರಿಷ್ಠ ಮಳೆಯಾಗಿದೆ.
ಇದು ಈ ಭಾಗದಲ್ಲಿ ಒಂದು ದಶಕದಲ್ಲೇ ಅತ್ಯುತ್ತಮ ಮಳೆ ಪ್ರಮಾಣ ಎನಿಸಿಕೊಂಡಿದ್ದು, ವಾಡಿಕೆಗಿಂತ ಶೇಕಡ 7.1ರಷ್ಟು ಅಧಿಕ ಮಳೆಯಾಗಿದೆ. ಆದರೆ ದೇಶಾದ್ಯಂತ ಜೂನ್‍ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದಾಖಲಾದ ಅಧಿಕ ಮಳೆ ಪ್ರಮಾಣ (7.8%)ಕ್ಕಿಂತ ತುಸು ಕಡಿಮೆ. ಈ ವರ್ಷದ ಮುಂಗಾರು ಅವಧಿ ಅಧಕೃತವಾಗಿ ಸೋಮವಾರ ಮುಕ್ತಾಯವಾಗಲಿದ್ದು, 2020ರ ಬಳಿಕ ಅತಿಹೆಚ್ಚು ಮಳೆಯನ್ನು ಈ ಅವಧಿಯಲ್ಲಿ ದಾಖಲಿಸಿದೆ. ಜತೆಗೆ 2019ರ ಬಳಿಕ ಮಳೆ ಅಭಾವವನ್ನು ಎದುರಿಸುತ್ತಿರುವ ಉಪವಿಭಾಗಗಳು ಕೂಡಾ ಈ ಬಾರಿ ಅತ್ಯಂತ ಕಡಿಮೆ. ಒಟ್ಟು 36 ಉಪವಿಭಾಗಗಳ ಪೈಕಿ ಕೇವಲ 3 ಉಪವಿಭಾಗಗಳಲ್ಲಷ್ಟೇ ಈ ಬಾರಿ ಅಭಾವ ಪರಿಸ್ಥಿತಿ ಇದೆ.
ದೀರ್ಘಾವಧಿ ಸರಾಸರಿಗೆ ಹೋಲಿಸಿದರೆ ಈ ಬಾರಿ ಮಳೆ ಪ್ರಮಾಣ ಶೇಕಡ 7-8ರಷ್ಟು ಅಧಿಕವಾಗಿದೆ. ಇದರಿಂದಾಗಿ ನಿರಂತರ ಆರನೇ ವರ್ಷ ದೇಶದಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ಉತ್ತರ ಭಾರತದಲ್ಲಿ ಸೆಪ್ಟೆಂಬರ್ 4ನೇ ವಾರದವರೆಗೂ ಮಳೆ ನಿರಂತರವಾಗಿ ಬಿದ್ದಿದ್ದು, ಪಂಜಾಬ್ ಹೊರತುಪಡಿಸಿದರೆ ಬೆಟ್ಟ ರಾಜ್ಯಗಳಿಗಿಂತ ಬಯಲು ಪ್ರದೇಶಗಳಲ್ಲಿ ಅಧಿಕ ಮಳೆಯಾಗಿದೆ. ಪಂಜಾಬ್ ಮಾತ್ರ ಈ ಋತುವಿನಲ್ಲಿ ಶೇಕಡ 28ರಷ್ಟು ಮಳೆ ಅಭಾವ ಪರಿಸ್ಥಿತಿ ಹೊಂದಿದೆ.
ಪಶ್ಚಿಮ ಹಾಗೂ ಪೂರ್ವ ರಾಜಸ್ಥಾನ ಬಯಲು ಪ್ರದೇಶದ ಇತರ ಉಪವಿಭಾಗಗಳು ವಾಡಿಕೆಯಷ್ಟು (ಧೀರ್ಘಾವಧಿ ಸರಾಸರಿಯ -20 ರಿಂದ +20) ರಷ್ಟು ಮಳೆ ಸ್ವೀಕರಿಸಿವೆ. ಪಶ್ಚಿಮ ರಾಜಸ್ಥಾನದಲ್ಲಿ ಅಧಿಕ ಮಳೆಯಾಗಿದ್ದರೆ, ಪೂರ್ವ ರಾಜಸ್ಥಾನದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸೆಪ್ಟೆಂಬರ್ ಕೊನೆಗೆ ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಮಳೆಯಾಗಿರುವುದರಿಂದ ತೇವಾಂಶ ಅಧಿಕವಿದ್ದು, ಹಿಂಗಾರು ಬೆಳೆಗಳನ್ನು ಅಕ್ಟೋಬರ್ ಕೊನೆಯಲ್ಲಿ ಬಿತ್ತಲು ಇದು ನೆರವಾಗಲಿದೆ.