“ದೇಶದಲ್ಲೇನು ನಡೆಯುತ್ತಿದೆ?”: ಅಮೆರಿಕಾ ಪ್ರವಾಸದಿಂದ ವಾಪಸಾದ ಬಳಿಕ ನಾಯಕರನ್ನು ಕೇಳಿದ ಮೋದಿ
ನಡ್ಡಾ ಅವರನ್ನುದ್ದೇಶಿಸಿ ಪ್ರಧಾನಿ ಮೋದಿ ಇಲ್ಲಿ ಹೇಗೆ ನಡೆಯುತ್ತಿದೆ? ಎಂದು ಕೇಳಿದರು., ಅದಕ್ಕೆ ನಡ್ಡಾ ಅವರು ಬಿಜೆಪಿ ಸರ್ಕಾರದ ಒಂಬತ್ತು ವರ್ಷಗಳ ಪ್ರಗತಿ ವರದಿ ಕುರಿತು ಪಕ್ಷ ನಾಯಕರು ಜನರಿಗೆ ತಿಳಿಸುತ್ತಿದ್ದಾರೆ ಮತ್ತು ದೇಶ ಸಂತೋಷವಾಗಿದೆ ಎಂದು ಹೇಳಿದರು
ಹೊಸದಿಲ್ಲಿ: ತಮ್ಮ ಆರು ದಿನಗಳ ಅಮೆರಿಕಾ ಮತ್ತು ಈಜಿಪ್ಟ್ ಪ್ರವಾಸದ ಬಳಿಕ ಇಂದು ಮುಂಜಾನೆ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ವಾಪಸಾದಾಗ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಹರ್ಷವರ್ಧನ್, ಹಂಸ್ ರಾಜ್ ಹಂಸ್, ಗೌತಮ್ ಗಂಭೀರ್ ಸಹಿತ ಹಲವು ಬಿಜೆಪಿ ನಾಯಕರು ಎದುರುಗೊಂಡರು.
ಈ ಸಂದರ್ಭ ನಡ್ಡಾ ಅವರನ್ನುದ್ದೇಶಿಸಿ ಪ್ರಧಾನಿ ಮೋದಿ ಇಲ್ಲಿ ಹೇಗೆ ನಡೆಯುತ್ತಿದೆ? ಎಂದು ಕೇಳಿದರು., ಅದಕ್ಕೆ ನಡ್ಡಾ ಅವರು ಬಿಜೆಪಿ ಸರ್ಕಾರದ ಒಂಬತ್ತು ವರ್ಷಗಳ ಪ್ರಗತಿ ವರದಿ ಕುರಿತು ಪಕ್ಷ ನಾಯಕರು ಜನರಿಗೆ ತಿಳಿಸುತ್ತಿದ್ದಾರೆ ಮತ್ತು ದೇಶ ಸಂತೋಷವಾಗಿದೆ ಎಂದು ಹೇಳಿದರು ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ನಂತರ ಸುದ್ದಿಗಾಋರಿಗೆ ತಿಳಿಸಿದರು.
ಇನ್ನೊಬ್ಬ ಬಿಜೆಪಿ ಸಂಸದ ಪರ್ವೇಶ್ ಶರ್ಮ ಮಾತನಾಡಿ ದೇಶದಲ್ಲೇನು ನಡೆಯುತ್ತಿದೆ ಮತ್ತು ಪಕ್ಷದ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಹೇಗೆ ನಡೆಯುತ್ತಿದೆ ಎಂದು ಪ್ರಧಾನಿ ಕೇಳಿದರು ಎಂದು ಹೇಳಿದರು.
ಆ ಕುರಿತು ಅವರಿಗೆ ಮಾಹಿತಿ ನೀಡಿದೆವು ಎಂದು ಶರ್ಮ ತಿಳಿಸಿದ್ದಾರೆ.