ಒಳ ಮೀಸಲಾತಿಗೆ ಸರ್ಕಾರ ಮುಂದಾಗಲಿ: ವಿಚಾರಗೋಷ್ಠಿಯಲ್ಲಿ ಒತ್ತಾಯ

Update: 2024-09-21 13:11 GMT

ರಾಯಚೂರು: ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ರಾಯಚೂರು ಹಾಗೂ ಶ್ರೀ ಆದಿ ಜಾಂಬವ ವೆಲ್ಫೇರ್ ಟ್ರಸ್ಟ್ ರಾಯಚೂರು ಅವರ ವತಿಯಿಂದ ನಗರದ ರಂಗಮಂದಿರ ಹಿಂದಿರುವ ಮಾದರ ಚೆನ್ನಯ್ಯ ಭವನದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸುವ ಕುರಿತು ವಿಚಾರಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ನಡೆಯಿತು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ತಳ ಸಮುದಾಯದ ವಿದ್ಯಾವಂತರು ಹಾಗೂ ನೌಕರರು ಜಾಗೃತರಾಗಿ ಒಳ ಮೀಸಲಾತಿ ಪಡೆದುಕೊಳ್ಳಲು ಅಗತ್ಯ ಸಹಕಾರ ನೀಡಬೇಕು ಮನವಿ ಮಾಡಿದರು.

ವಿಚಾರಗೋಷ್ಠಿಯ ಮಂಡನೆ ಮಾಡಿದ ಹೈಕೋರ್ಟ್ ಹಿರಿಯ ನ್ಯಾಯವಾದಿ ಹರಿರಾಮ್ ಅವರು, ಒಳ ಮೀಸಲಾತಿಯ ಜಾರಿಯನ್ನು ಸರಕಾರ ಶೀಘ್ರವೇ ಮಾಡಬೇಕೆಂದು ತಮ್ಮ ವಿಚಾರವನ್ನು ಮಂಡಿಸಿದರು.

ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಚಿಂತಕ ಭಾಸ್ಕರ್ ಪ್ರಸಾದ್, ಹೋರಾಟಗಾರ ಅಂಬಣ್ಣ ಆರೋಲಿಕರ್, ಅಲೆಮಾರಿ ಜನಾಂಗದ ನಾಯಕ ಮೋಹನ್ ದಾಸರಿ ಮಾತನಾಡಿದರು.

ಆದಿ ಜಾಂಬವ ಸೇವಾ ವೆಲ್‌ಫೇರ್ ಟ್ರಸ್ಟ್‌ ಅಧ್ಯಕ್ಷ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಟಿ.ರೆಡ್ಡಿ, ನಗರಸಭೆಯ ಸದಸ್ಯ ನಾಗರಾಜ, ಟ್ರಸ್ಟ್‌ ಉಪಾಧ್ಯಕ್ಷ ಯಮುನಪ್ಪ ಗಿರಿಜಾಲಿ, ವೆಂಕಟೇಶ, ಸದಸ್ಯರಾದ ರಾಮಚಂದ್ರ ಕಲ್ಲೂರ್, ಗಂಗಪ್ಪ, ರಾಮುಲು, ಜೆ. ರಾಮಪ್ಪ, ತಿಮ್ಮಪ್ಪ, ತಿರುಮಲ ರಾವ್, ಸತ್ಯನಾಥ್, ಆಜಪ್ಪ, ನರಸಿಂಗಪ್ಪ, ಭೀಮಪ್ಪ ಗಂಟೆ ಭಾಗವಹಿಸಿದ್ದರು.

ಟ್ರಸ್ಟ್‌ ಗೌರವ ಅಧ್ಯಕ್ಷ ಬಿ.ಎಚ್. ಗುಂಡಳ್ಳಿ ಸ್ವಾಗತಿಸಿದರು. ಟ್ರಸ್ಟ್‌ ಕಾರ್ಯದರ್ಶಿ ಬಾಬು ಕಮಲಾಪುರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಟೆಪ್ಪ ಗೌರಿಪುರ ನಿರೂಪಿಸಿದರು. ಬಾಬು ಕಮಲಾಪುರ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News