ರಾಯಚೂರು | ಅಮಿತ್ ಶಾ ವಿರುದ್ಧ ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

Update: 2024-12-20 13:54 GMT

ರಾಯಚೂರು : ಕೇಂದ್ರ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್ ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಂವಿಧಾನ ರಚನಾಕಾರರಾದ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಅಮಿತ್ ಶಾ ಅವರು ಆರ್ ಎಸ್ಎಸ್ ಅಜೆಂಡಾ 2025ಕ್ಕೆ ಹಿಂದೂ ರಾಷ್ಟ್ರವಾಗಿ ಬದಲಾಯಿಸುವ ಹುನ್ನಾರದ ಭಾಗವಾಗಿದೆ ಎಂದು ಹೋರಾಟಗಾರ ಎಸ್.ಮಾರೆಪ್ಪ ಆರೋಪಿಸಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಹೋರಾಟಗಾರ ಮಾರೆಪ್ಪ ಹರವಿ, ಜಾನ್ ವೆಸ್ಲಿ, ರವಿಂದ್ರನಾಥ್ ಪಟ್ಟಿ, ಖಾಜಾ ಅಸ್ಲಂ ಅಹ್ಮದ್, ಜಿ.ಅಮರೇಶ್, ಅಂಜಿನಯ್ಯ ಕುರುಬದೊಡ್ಡಿ, ನರಸಪ್ಪ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News