ಭತ್ತ ಮತ್ತು ಜೋಳ ನೋಂದಣಿಗೆ ಡಿ.31ಕೊನೆಯ ದಿನ: ಲಿಂಗಸುಗೂರು ತಹಶೀಲ್ದಾರ್ ಶಂಶಾಲಂ

Update: 2024-12-20 07:14 GMT

ರಾಯಚೂರು : ಸರ್ಕಾರದ ಆದೇಶದಂತೆ 2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಜೋಳವನ್ನು ನೀಡಲು ಇಚ್ಛಿಸುವ ರೈತಭಾಂದವರು ತಮ್ಮ ಹತ್ತಿರದ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್, ಕೃಷಿ ಇಲಾಖೆಯವರು ನೀಡಿರುವ ಎಫ್‌ಐಡಿ ಸಂಖ್ಯೆಯೊಂದಿಗೆ ಇದೇ ಡಿ.31ರೊಳಗಾಗಿ ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಲಿಂಗಸುಗೂರು ತಾಲ್ಲೂಕ ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರರು ಹಾಗೂ ಅಧ್ಯಕ್ಷ ಅವರು ತಿಳಿಸಿದ್ದಾರೆ.

ಲಿಂಗಸುಗೂರು ತಾಲೂಕಿನ ರೈತರಿಂದ ಖರೀದಿ ಪ್ರಕ್ರಿಯೆಯನ್ನು 2025ರ ಜ.1ರಿಂದ ಮಾ.31ರವರೆಗೂ ಕೈಗೊಳ್ಳಲಾಗುವುದು, ಪ್ರಯುಕ್ತ ರೈತಭಾಂದವರು ತಾವು ಬೆಳೆದ ಬೆಳೆಯನ್ನು ಮಾತ್ರ ಖುದ್ದಾಗಿ ಖರೀದಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿ ಮಾರಾಟ ಮಾಡಿಕೊಳ್ಳಬೇಕು. ಈ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು.

ಲಿಂಗಸುಗೂರು ತಾಲ್ಲೂಕಿನಲ್ಲಿ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ., ಲಿಂಗಸುಗೂರು ಮೊಬೈಲ್ ನಂ:9972551962, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಆಮದಿಹಾಳ ಮೊಬೈಲ್ ನಂ:8197257538, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮುದಗಲ್ ಮೊಬೈಲ್ ನಂ:9980681521, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮಟ್ಟೂರು ಮೊಬೈಲ್ ನಂ:8762008530ಗೆ ಸಂಪರ್ಕ ಮಾಡಬಹುದಾಗಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್ ಭತ್ತ ಹಾಗೂ ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 150 ಕ್ವಿಂಟಾಲ್ ಬಿಳಿಜೋಳ ಖರೀದಿಸಲಾಗುವುದು.

ದರಗಳ ವಿವರ; ಭತ್ತ-ಸಾಮಾನ್ಯ:  2300ರೂ., ಭತ್ತ-ಗ್ರೇಡ್-ಎ, 2320ರೂ. ಬಿಳಿಜೋಳ-ಹೈಬ್ರಿಡ್;3371ರೂ, ಬಿಳಿಜೋಳ-ಮಾಲ್ದಚಿಡಿ; 3421ರೂ,ಗಳನ್ನು ದರವನ್ನು ನಿಗದಿ ಮಾಡಲಾಗಿದ್ದು, ರೈತರು ಕೃಷಿ ಇಲಾಖೆಯವರು ಸಿದ್ದಪಡಿಸಿರುವ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆಯಿದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಲಿಂಗಸುಗೂರು ತಾಲ್ಲೂಕ ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರರು ಹಾಗೂ ಅಧ್ಯಕ್ಷರಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News