ರಾಯಚೂರು | ತಾಲ್ಲೂಕಿನಲ್ಲಿ 3ನೇ ಬಾರಿ ವಿಶೇಷ ತೆರಿಗೆ ವಸೂಲಾತಿ ಅಭಿಯಾನ
ರಾಯಚೂರು : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕರಾಂ ಪಾಂಡ್ವೆ ಅವರು ಸೂಚನೆಯಂತೆ 34 ಗ್ರಾಮ ಪಂಚಾಯತಿಗಳಲ್ಲಿ ಗುರುವಾರ ದಂದು ವಿಶೇಷ ತೆರಿಗೆ ವಸೂಲಾತಿ ಅಭಿಯಾನವು ಶರವೇಗದಲ್ಲಿ ನಡೆಸುವ ಮೂಲಕ 45,12,605ಲಕ್ಷ ರೂ. ತೆರಿಗೆಯನ್ನು ಸಂಗ್ರಹಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ವಿಶೇಷ ತೆರಿಗೆ ವಸೂಲಾತಿ ಅಭಿಯಾನವನ್ನು ತಾಲ್ಲೂಕಿನದ್ಯಾಂತ ರಾಯಚೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್ ಹಾಗೂ ಸಹಾಯಕ ನಿರ್ದೇಶಕರ ಪಂಚಾಯತ್ ರಾಜ್ ಶಿವಪ್ಪ ಅವರ ನೇತೃತ್ವದಲ್ಲಿ ಒಂದು ದಿನದ ವಿಶೇಷ ತೆರಿಗೆ ವಸೂಲಾತಿ ಅಭಿಯಾನ ಜರುಗಿದ್ದು, 34 ಗ್ರಾಮ ಪಂಚಾಯತಿಗಳಲ್ಲಿ ನೀರಿನ ಕರ, ಮನೆ ಶುಲ್ಕ, ಮಳಿಗೆ ಕರ, ಖಾಲಿ ಜಾಗ ಕರ, ಮೊಬೈಲ್ ಟವರ್ ಶುಲ್ಕ ಸೇರಿದಂತೆ ಸಕಾಲಕ್ಕೆ ಪಾವತಿಸದೇ ಇರುವ ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ತೆರೆಗೆ ವಸೂಲಾತಿ ಮಾಡುವ ಅಭಿಯಾನದಲ್ಲಿ ಜನರು ತೆರಿಗೆ ಕಟ್ಟುವ ಮೂಲಕ ಗ್ರಾಮ ಪಂಚಾಯತಿಗಳಿಗೆ ಸ್ವಂತ ಸಂಪನ್ಮೂಲಕ್ಕೆ ಬಲ ತುಂಬಿದ್ದಾರೆ.
ವಿಶೇಷ ತೆರಿಗೆ ಅಭಿಯಾನ ಕೈಗೊಂಡ ಅದೇ ದಿನ ಮುಕ್ತಾಯದ ಹೊತ್ತಿಗೆ 45,12,605ಲಕ್ಷ ರೂ. ತೆರಿಗೆಯನ್ನು ಸಾರ್ವಜನಿಕರು ಗ್ರಾಮ ಪಂಚಾಯತ್ ಬೊಕ್ಕಸಕ್ಕೆ ಭರಿಸಿದ್ದಾರೆ.
ಮೂರನೇ ಬಾರಿ ವಿಶೇಷ ತೆರಿಗೆ ಅಭಿಯಾನದ ಮೂಲಕ ತಾ.ಪಂ ಹಾಗೂ ಸಹಾಯಕ ನಿರ್ದೇಶಕರ, ಗ್ರಾ.ಪಂ ಅಧಿಕಾರಿ, ಸಿಬ್ಬಂದಿಗಳನ್ನು ನಿರಂತರವಾಗಿ ಪ್ರೇರಣೆಗೊಳಿಸಿ, ಅತ್ಮ ವಿಶ್ವಾಸ ಹೆಚ್ಚಿಸಿ, ತೆರಿಗೆ ಅಭಿಯಾನವನ್ನು ಯಶಸ್ವಿಗೊಳಿಸಿರುವುದರಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಕೃಡೀಕರಣದಿಂದ ವಿಕೇಂದ್ರೀಕರಣ ವ್ಯವಸ್ಥೆಗೆ ಬಲ ಬಂದಂತಾಗಿದೆ.