ರಾಯಚೂರು | ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ : ಡಿಎಚ್ಒ ಸುರೇಂದ್ರ ಬಾಬು
ರಾಯಚೂರು : ಭಾರತೀಯ ಹವಮಾನ ಇಲಾಖೆಯಿಂದ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜಿಲ್ಲೆಯಾದ್ಯಂತ ಬೆಳಗಿನ ಜಾವ ತೀವ್ರವಾದ ಶೀತಗಾಳಿ ಬಿಸುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಜಾಗೃತರಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ತಿಳಿಸಿದರು.
ಗ್ರಾಮಗಳಲ್ಲಿ ಸಾರ್ವಜನಿಕರು ಮತ್ತು ರೈತರು ಅನಾವಶ್ಯಕವಾಗಿ ದ್ವಿಚಕ್ರ ವಾಹನಗಳಲ್ಲಿ ಹೊರಗಡೆ ತಿರುಗಾಡಬಾರದು. ಹವಮಾನ ಬದಲಾವಣೆಯಿಂದ ಬರುವ ಶೀತ, ವೈರಲ್ ಜ್ವರ ಹಾಗೂ ಇತರೆ ಸೋಂಕುಗಳಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು. ಬಿಸಿಯಾದ ಪೌಷ್ಠಿಕ ಆಹಾರ ಸೇವಿಸಬೇಕು. ಶೀತ ಆಹಾರ ತಣನೆ ನೀರು ಐಸಕ್ರೀಮ್ ಸೇವಿಸಬೇಡಿ. ಶುಚಿತ್ವ ಕಾಪಾಡಿಕೊಳ್ಳಿ ಹಾಗೂ ಕುಡಿಯಲು ಶುದ್ಧವಾದ ನೀರು ಬಳಸಬೇಕು ಎಂದು ತಿಳಿಸಿದರು.
ಚಳಿಗಾಲದಲ್ಲಿ ಚರ್ಮದ ತ್ವಚೆ ಕಾಪಾಡಲು ಕೊಬ್ಬರಿ ಎಣ್ಣೆ ಸೇರಿದಂತೆ ನೈಸರ್ಗಿಕ ತೈಲ ಬಳಸಿ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಬೇಕು.
ಶೀತದ ಲಕ್ಷಗಳು ಅಥವಾ ವೈರಲ್ ಜ್ವರ ಕಂಡುಬಂದಲ್ಲಿ ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.