ರಾಯಚೂರು: ಅತ್ಯಾಚಾರಕ್ಕೆ ಒಪ್ಪದ ಸೊಸೆಯನ್ನು ಹತ್ಯೆಗೈದ ಮಾವ; ಆರೋಪಿ ಪರಾರಿ
ರಾಯಚೂರು: ಬಲವಂತವಾಗಿ ಅತ್ಯಾಚಾರ ಮಾಡಲು ಮುಂದಾದಾಗ ಒಪ್ಪದ ಕಾರಣಕ್ಕೆ ಸೊಸೆಯನ್ನು ಮಾವ ಕೊಲೆ ಮಾಡಿರುವ ಘಟನೆ ಜುಲಮಗೇರಾ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತ ಮಹಿಳೆಯನ್ನು ದುಳ್ಳಮ್ಮ (26) ಎಂದು ಗುರುತಿಸಲಾಗಿದೆ. ಈಕೆ ಮಿರ್ಜಾಪುರ ಗ್ರಾಮಸ್ಥಳಾಗಿದ್ದು, ಜುಲಮಗೇರಾ ಗ್ರಾಮಕ್ಕೆ ವಿವಾಹವಾಗಿ ಬಂದಿದ್ದಳು.
ಬೆಳಿಗ್ಗೆ ಮಹಿಳೆಯ ಪತಿ ಕುರಿ ಕಾಯಲು ಹೋದಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವ ಸಂತುಳ್ಳ ರಾಮಲಿಂಗಯ್ಯ ಕುಂಡಫಾಲಯ್ಯ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಒಪ್ಪದ ಕಾರಣಕ್ಕೆ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೊಲೆ ಮಾಡಿದ ಆರೋಪಿ ಈಗ ಪರಾರಿಯಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಇಡಪನೂರು ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮೃತ ಮಹಿಳೆಗೆ ಒಂದು ಹೆಣ್ಣು ,ಗಂಡು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.