ರಾಯಚೂರು | ಸಾರ್ವಜನಿಕರ ಸಹಕಾರದಿಂದ ಅಪರಾಧ ನಿಯಂತ್ರಣ ಸಾಧ್ಯ : ಪಿಎಸ್ಐ ಚಂದ್ರಪ್ಪ

Update: 2024-12-11 13:56 GMT

ರಾಯಚೂರು : ಅಪರಾಧ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಅಪರಾಧ ತಡೆಗಟ್ಟಲು ಸಹಕರಿಸಬೇಕು ಎಂದು ನೇತಾಜಿನಗರ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಪ್ಪ ಮನವಿ ಮಾಡಿದರು.

ನಗರದ ನೇತಾಜಿ ನಗರ ಪೊಲೀಸ್ ಠಾಣೆಯಿಂದ ಬುಧವಾರ ಆಯೋಜಿಸಿದ್ದ ʼಅಪರಾಧ ತಡೆ ಮಾಸಾಚಾರಣೆʼ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳ್ಳತನ ಪ್ರಕರಣಗಳನ್ನು ತಡೆಯಲು ಸಾರ್ವಜನಿಕರು ಮುನ್ನಚ್ಚರಿಕೆ ವಹಿಸಬೇಕಿದೆ. ಊರುಗಳಿಗೆ ಹೋಗುವಾಗ ಮಾಹಿತಿ ನೀಡುವುದು, ಸಿಸಿಟಿವಿ ಅಳವಡಿಸುವುದು, ಬೆಲೆಬಾಳುವ ಆಭರಣಗಳನ್ನು ಸುರಕ್ಷಿತ ಸ್ಥಳದಲ್ಲಿ ರಕ್ಷಿಸುವ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಬೀಟ್ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಕಳ್ಳತನ ಪ್ರಕರಣ ರಕ್ಷಿಸಿಕೊಳ್ಳಬೇಕು. ಮಹಿಳೆಯರು ಆಭರಣಗಳನ್ನು ಹಾಕಿಕೊಂಡು ಹೋಗುವಾಗ ಹಿಂದೆ ಮುಂದೆ ನೋಡಬೇಕು. ಅಪರಿಚಿತರ ಕಂಡರೆ ಎಚ್ಚರಿಕೆವಹಿಸಬೇಕು. ಪೊಲೀಸ್ ಇಲಾಖೆಯಿಂದ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ. ಜನರು ಸ್ವಯಂಪ್ರೇರಿತರಾಗಿ ಮಾಹಿತಿ ಅಪರಾಧ ನಿಯಂತ್ರಿಸಲು ಸಹಕರಿಸಬೇಕು ಎಂದು ತಿಳಿಸಿದರು.

ಅಟೋ ಚಾಲಕರು, ಬಡಾವಣೆ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News