ರಾಯಚೂರು | ಬೀದಿನಾಯಿಗಳ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯಿಸಿ ಪ್ರತಿಭಟನೆ

Update: 2024-12-16 14:56 GMT

ರಾಯಚೂರು : ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಮಡ್ಡಿಪೇಟೆಯ ನಿವಾಸಿ ಮಹಾದೇವಿ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯಿಸಿ ಭಾರತ ಕಮ್ಯುನಿಷ್ಟ ಪಕ್ಷದ (ಮಾರ್ಕ್ಸ್ವಾದಿ) ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಮಡ್ಡಿಪೇಟೆ ಬಡಾವವಣೆಯಲ್ಲಿ ಡಿ.7ರಂದು ಮನೆಯ ಮುಂದೆ ನಿಂತಿದ್ದ ಮಹಾದೇವಿ (23) ಅವರ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಗಾಯಗೊಂಡು ನಂತರ ಕೋಮಾ ಸ್ಥಿತಿಗೆ ಹೋಗಿ ಸಾವನ್ನಪ್ಪಿದ್ದಾರೆ. ನಗರದ ಸ್ಲಂ ಪ್ರದೇಶಗಳಾದ ಮಡ್ಡಿಪೇಟೆ, ಎಲ್ಬಿಎಸ್ ನಗರ, ಸಿಯಾತಲಾಬ, ಹರಿಜನವಾಡ, ಜಲಾಲನಗರ, ಮೈಲಾರನಗರ, ಕಾಳಿದಾಸನಗರ, ಜಹೀರಾಬಾದ್ ಸ್ಟೇಷನ್ ಏರಿಯಾ, ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು.

ಬೀದಿ ನಾಯಿಗಳು ಬಡಾವಣೆಗಳಲ್ಲಿ ಆಟ ಆಡುವ ಮಕ್ಕಳು, ರಸ್ತೆಗಳಲ್ಲಿ ಸಂಚರಿಸುವ ಬೈಕ್ ಸವಾರರ ಮೇಲೆ ಎರಗುತ್ತವೆ. ಬೀದಿ ನಾಯಿಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ನಗರಸಭೆ ಹಾಗೂ ಜಿಲ್ಲಾಡಳಿತ ಬೀದಿನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಹೆಚ್.ಪದ್ಮಾ, ಕರಿಯಪ್ಪ ಅಚ್ಚೋಳಿ, ಇಂದಿರಾ, ನಾಗರಾಜ, ಹನ್ನುಂತು, ಶಿವಣ್ಣ, ಶ್ರೀನಿವಾಸ, ರಾಜು, ಲಕ್ಷ್ಮಣ, ರೇಣುಕಾಮ್ಮ, ಶರಣಮ್ಮ, ಅನಿಲ್, ಗಗನ್, ಬುಜಪ್ಪ, ಡಿ.ಎಸ್.ಶರಣಬಸವ, ಗೋಕಾರಮ್ಮ, ಸೇರಿದಂತೆ ಮಡ್ಡಿಪೇಟೆ ನಿವಾಸಿಗಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News