ರಾಯಚೂರು | ಬೀದಿ ನಾಯಿಗಳ ದಾಳಿ : ತೀವ್ರ ಅಸ್ವಸ್ಥಗೊಂಡ ಯುವತಿ ಕೋಮಾ ಸ್ಥಿತಿಗೆ

Update: 2024-12-10 16:04 GMT

ರಾಯಚೂರು : ನಗರದ ವಾರ್ಡ್ ನಂಬರ್ 23ರ ಮಡ್ಡಿಪೇಟೆ ಬಡಾವಣೆಯಲ್ಲಿ ಬೀದಿ ನಾಯಿಗಳ ದಾಳಿಯಿಂದ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಈಗ ಕೋಮ ಹಂತಕ್ಕೆ ತಲುಪಿದ್ದಾಳೆ.

ಮಡ್ಡಿಪೇಟೆಯ ಲಕ್ಷ್ಮಣಸ್ವಾಮಿ ಮಠದ ಹಿಂದೆ ವಾಸವಾಗಿದ್ದ ಮಹಾದೇವಿ ಮುನಿಯಪ್ಪ ಡಿ.7ರಂದು ಮನೆಯ ಮುಂದೆ ನಿಂತಾಗ ಬೀದಿ ನಾಯಿಗಳ ದಂಡು ದಾಳಿ ಮಾಡಿವೆ. ತಕ್ಷಣ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದಿತು. ನಂತರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಜೆಯವರೆಗೂ ಯುವತಿ ಎಚ್ಚರಿಕೆ ಆಗದ ಕಾರಣ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತ ಹೆಪ್ಪು ಗಟ್ಟಿದೆ ಕೋಮ ಸ್ಥಿತಿಗೆ ಹೋಗಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ರವಾನಿಸಿದ್ದರು.

ಬಳ್ಳಾರಿಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರೆಫರ್ ಮಾಡಿದ್ದಾರೆ. ಆದರೆ ತೀವ್ರ ಬಡತನವಿರುವ ಕಾರಣ ಪುನಃ ರಾಯಚೂರು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು ಎಂದು ಪಾಲಕರು ತಿಳಿಸಿದ್ದಾರೆ. ತನ್ನದಲ್ಲದ ತಪ್ಪಿಗೆ ಬೀದಿ ನಾಯಿಗಳ ದಾಳಿಗೆ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಈಗ ನಗರಸಭೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಪಾಲಕರು ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಹಿಂದೆಯೂ ಮೂವರು ಮಕ್ಕಳ ಬೀದಿನಾಯಿಗಳ ದಾಳಿಗೆ ಗುರಿಯಾಗಿ ಚಿಕಿತ್ಸೆ ಪಡೆದಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News