ಅನನುಕೂಲತೆಗಳೇ ಸಂಶೋಧನೆಗೆ ಪ್ರೇರಣೆ : ಡಾ.ಸುರೇಶ್ ಬಿ.ಅರಕೆರೆ
ಸಿಂಧನೂರು : ನಿಸರ್ಗದಲ್ಲಿ ಕೊರತೆಗಳು ಉಂಟಾದಾಗ ಅದಕ್ಕೆ ಪರಿಹಾರವನ್ನು ಕಂಡು ಕೊಳ್ಳುವುದೇ ಸಂಶೋಧನೆಗೆ ಪ್ರೇರಣೆಯಾಗುತ್ತದೆ ಎಂದು ಧಾರವಾಡ ವಿಶ್ವವಿದ್ಯಾಲಯದ ಅಪ್ಲೈಡ್ ಜೆನೆಟಿಕ್ಸ್ ವಿಭಾಗದ ಸಂಯೋಜಕ ಡಾ.ಸುರೇಶ್ ಬಿ.ಅರಕೆರೆ ತಿಳಿಸಿದ್ದಾರೆ.
ನಗರದ ಸತ್ಯಗಾಡನಲ್ಲಿ ಎಜೆ ಅಕಾಡೆಮಿ ರಿಸರ್ಚ್ & ಡೆವಲಪ್ಮೆಂಟ್ ರಾಯಚೂರು, ನೋಬಲ್ ಟೆಕ್ನೋ ಶಾಲೆ ಹಾಗೂ ಇಕ್ರಾ ಪಬ್ಲಿಕ್ ಶಾಲೆ ಸಿಂಧನೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ʼಸಿಂಧನೂರು ಅಂತರ್ ಶಾಲಾ ವಿಜ್ಞಾನ ಮೇಳʼ ಉದ್ಘಾಟಿಸಿ ಮಾತನಾಡಿದರು.
ಮಂಗ ತನ್ನ ಹೊಟ್ಟೇ ನೋವಿಗೆ ಎಲೆಯನ್ನು ವಿವಿಧ ರೀತಿಯಲ್ಲಿ ತಿನ್ನುವುದನ್ನು ನೋಡಿ ಔಷಧಿಯನ್ನು ಕಂಡು ಹಿಡಿಯಲಾಯಿತು, ಬರುವ ದಿನಗಳಲ್ಲಿ ಎಲ್ಲಾ ರಕ್ತ ಪರೀಕ್ಷೆಯು ಲೇಸರ್ ಬೆಳಕಿನಿಂದ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಬ್ದುಲ್ಲಾ ಜಾವೇದ್ ಏಜೇ ಅಕಾಡೆಮಿ ರಾಯಚೂರು ಮಾತನಾಡಿ, ಪ್ರಾಥಮಿಕ ಹಂತದಿಂದ ಸಂಶೋಧನೆ ಪಠ್ಯದ ಭಾಗವಾಗಬೇಕೆ ವಿನಹ ಪಠ್ಯೇತರ ಚಟುವಟಿಕೆ ಆಗಬಾರದು. ವಿಜ್ಞಾನ ಮೇಳವು ವಿದ್ಯಾರ್ಥಿಗಳ ಬುದ್ಧಿ ವಿಕಾಸ ಜೊತೆಗೆ ವಿಶ್ಲೇಷಣಾತ್ಮಕ ಸಂಶೋಧನಾ ಮನೋಭಾವವನ್ನು ಬೆಳೆಸುತ್ತದೆ ಹಾಗೂ ವಿಜ್ಞಾನ ಮೇಳವು ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ಅರಿಯಲು, ಹೊಸ ಆಲೋಚನೆಗಳನ್ನು ಅಳವಡಿಸಲು ಮತ್ತು ನಿರೂಪಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್, ಗಣಿತ ಶಿಕ್ಷಕರ ವೇದಿಕೆಯ ಅಧ್ಯಕ್ಷರಾದ ಬಾಲಪ್ಪ ದಾಸರ್, ನಿವೃತ್ತ ಕನ್ನಡ ಶಿಕ್ಷಕ ಸೈಯದ್ ಗೌಸ್ ಮೋಹಿಯುದ್ದಿನ್ ಪಿರಿಜಾದೆ, ನೋಬಲ್ ಟೆಕ್ನೋ ಶಾಲೆಯ ಕಾರ್ಯದರ್ಶಿ ಸೈಯದ್ ತನ್ವೀರ್, ಇಕ್ರಾ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಅಬ್ದುಲ್ ಹಸೀಬ್ ಉಪಸ್ಥಿತರಿದ್ದರು
ಸಮಾರೋಪ ಸಮಾರಂಭವನ್ನು ನೋಬಲ್ ಟೆಕ್ನೋ ಶಾಲೆಯ ಶಿಕ್ಷಕಿಯರಾದ ಮುಬೀನಾ ಮತ್ತು ಪಲ್ಲವಿ ನಿರೂಪಿಸಿದರು.
ವಿಜೇತರಿಗೆ ಬಹುಮಾನ ವಿತರಣೆ :
ಬಹುಮಾನ ವಿತರಣೆ ಸಮಾರಂಭದಲ್ಲಿ 9 ರಿಂದ 10 ತರಗತಿಯ ವೈಯಕ್ತಿಕ ವಿಭಾಗದಲ್ಲಿ ತಾಲ್ಲೂಕಿನ ಜವಳಗೆರೆ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಇಂಧನ ಅಳೆಯುವ ಸಾಧನ ಪ್ರದರ್ಶಿಸಿ ಪ್ರಥಮ ಬಹುಮಾನವಾಗಿ ಯಂಗ್ ಸೈಂಟಿಸ್ಟ್ ಎಂಬ ಬಿರುದು, 15,000 ಸಾವಿರ ರೂ. ಮೌಲ್ಯದ ಸೈನ್ಸ್ ಕಿಟ್, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಪಡೆದುಕೊಂಡರು.
6 ರಿಂದ 8 ತರಗತಿಯ ವೈಯಕ್ತಿಕ ವಿಭಾಗದಲ್ಲಿ ದೂದ್ದುಪುಡಿ ಶಾಲೆಯು ಪ್ರಥಮ ಸ್ಥಾನ ಗಳಿಸಿ ಯಮ್ಮರ್ಜಿಂಗ್ ಸೆಟ್ಟಿಂಗ್ ಎಂಬ ಬಿರುದು, 10,000 ರೂ. ಮೌಲ್ಯದ ಸೈನ್ಸ್ ಕಿಟ್, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಪಡೆದುಕೊಂಡರು. ಗುಂಪು ವಿಭಾಗದಲ್ಲಿ ನಗರದ ಆಡಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ಯಮ್ಮರ್ಜಿಂಗ್ ಸೆಟ್ಟಿಂಗ್ ಎಂಬ ಬಿರುದು ಹಾಗೂ ಟ್ರೋಫಿ, ಪ್ರಮಾಣ ಪತ್ರವನ್ನು ಪಡೆದುಕೊಂಡರು.
4 ರಿಂದ 5ನೇ ತರಗತಿಯ ವೈಯಕ್ತಿಕ ವಿಭಾಗದಲ್ಲಿ ನಗರದ ನೊಬಲ್ ಟೆಕ್ನೋ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರಥಮ ಸ್ಥಾನ ಪಡೆದು ಬಡ್ಡಿಂಗ್ ಸೈಂಟಿಸ್ಟ್ ಎಂಬ ಬಿರುದು, 5 ಸಾವಿರ ರೂ. ಮೌಲ್ಯದ ಸೈನ್ಸ್ ಕಿಟ್, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಪಡೆದುಕೊಂಡರು. ಗ್ರೂಪ್ ವಿಭಾಗದಲ್ಲಿ ಇಕ್ರಾ ಪಬ್ಲಿಕ್ ಶಾಲೆ ಪ್ರಥಮ ಸ್ಥಾನವನ್ನು ಪಡೆದು ಬಡ್ಡಿಂಗ್ ಸೈಂಟಿಸ್ಟ್ ಎಂಬ ಬಿರುದು, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಪಡೆದುಕೊಂಡರು
ಸಿಂಧನೂರು ಅಂತರ್ ಶಾಲಾ ವಿಜ್ಞಾನ ಮೇಳದಲ್ಲಿ 25 ಶಾಲೆಗಳ 160 ವಿದ್ಯಾರ್ಥಿಗಳು ಭಾಗವಹಿಸಿ, 90 ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.