ಪ್ಯಾರಿಸ್ ಒಲಿಂಪಿಕ್ಸ್ ಕೋಟಾದಿಂದ ವಂಚಿತವಾದ ಭಾರತೀಯ ಪುರುಷರ ರಿಕರ್ವ್ ತಂಡ
Update: 2024-06-15 17:13 GMT
ಹೊಸದಿಲ್ಲಿ : ಪ್ರವೀಣ್ ಜಾಧವ್, ತರುಣ್‌ದೀಪ್ ರಾಯ್ ಹಾಗೂ ಧೀರಜ್ ಬೊಮ್ಮದೇವರ ಅವರನ್ನೊಳಗೊಂಡ ಭಾರತೀಯ ಪುರುಷರ ರಿಕರ್ವ್ ತಂಡ ಮೆಕ್ಸಿಕೊ ತಂಡದ ಮಥಾಯಸ್ ಗ್ರ್ಯಾಂಡ್, ಕಾರ್ಲೊಸ್ ರೋಜಸ್ ಹಾಗೂ ಬ್ರುನೊ ಮಾರ್ಟಿನೆಝ್ ವಿರುದ್ಧ ಪ್ಯಾರಿಸ್ ಗೇಮ್ಸ್‌ಗಾಗಿ ನಡೆದ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋಲುಂಡಿದ್ದಾರೆ.
ಶನಿವಾರ ಅಂಟಲ್ಯಾದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು 4-5 ಅಂತರದಿಂದ ಸೋಲನುಭವಿಸಿದೆ.
ಭಾರತದ ಮೂವರು ಬಿಲ್ಗಾರರು ಪದಕ ಗೆಲ್ಲುವಲ್ಲಿ ವಿಫಲರಾದ ಕಾರಣ ನೇರ ಕೋಟಾ ಗಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 2 ಸ್ಥಾನಗಳನ್ನು ಜೂನ್ 24ರ ವರ್ಲ್ಡ್ ರ್ಯಾಂಕಿಂಗ್‌ನ ಮೂಲಕ ತುಂಬಲಾಗುತ್ತದೆ. ಭಾರತವು ಇದನ್ನೇ ಅವಲಂಬಿಸಿದೆ.
ಸದ್ಯ ಭಾರತೀಯ ತಂಡ ವಿಶ್ವದ ನಂ.2ನೇ ಸ್ಥಾನದಲ್ಲಿದೆ. ಕೋಟಾ ಗಳಿಸದ ತಂಡಗಳ ಪೈಕಿ ಗರಿಷ್ಠ ರ್ಯಾಂಕಿನಲ್ಲಿದೆ. ಇದರಿಂದಾಗಿ ಭಾರತ ಅರ್ಹತೆ ಪಡೆಯುವ ಸಾಧ್ಯತೆ ಅಧಿಕವಿದೆ.