IPL ಮೆಗಾ ಹರಾಜು | 14 ಕೋಟಿ ರೂ. ಗೆ ಡೆಲ್ಲಿ ಸೇರಿದ ಕೆ ಎಲ್‌ ರಾಹುಲ್

Update: 2024-11-24 17:29 IST
kl rahul

PC - PTI

  • whatsapp icon

ಜಿದ್ದಾ (ಸೌದಿ ಅರೇಬಿಯ) : ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿರುವ ಐಪಿಎಲ್‌ ಮೆಗಾ ಹರಾಜಿನಲ್ಲಿ ಭಾರತದ ಬ್ಯಾಟರ್ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಅವರನ್ನು ಡೆಲ್ಲಿ ತಂಡವು 14 ಕೋಟಿ ರೂ. ನೀಡಿ ತನ್ನತ್ತ ಸೆಳೆದಿದೆ.

ಮೂಲ ಬೆಲೆ 2 ಕೋಟಿ ರೂ ವಿನಿಂದ ಪ್ರಾರಂಭವಾದ ಹರಾಜಿನಲ್ಲಿ ಆರ್ ಸಿ ಬಿ ಮತ್ತು ಕೋಲ್ಕತ್ತಾ ನಡುವೆ ಪೈಪೋಟಿ ನಡೆಯಿತು. 11 ಕೋಟಿ ರೂ.ವರೆಗೂ ಆ ಎರಡು ತಂಡಗಳ ನಡುವೆ ಸ್ಪರ್ಧೆ ನಡೆಯಿತು. 11 ಕೋಟಿ ರೂ.ವಿಗೆ ಡೆಲ್ಲಿ ತಂಡವು ಹರಾಜು ಪ್ರವೇಶಿಸಿತು. ಬಳಿಕ 12.25 ಕೋಟಿ ರೂ.ವಿಗೆ ಚೆನ್ನೈ ಬಿಡ್ ಪ್ರವೇಶಿಸಿತು. ಆದರೂ ಪಟ್ಟು ಬಿಡದ ಡೆಲ್ಲಿ ತಂಡವು 14 ಕೋಟಿ ರೂ.ಗೆ ಬಿಡ್ ಜಯಿಸಿ ಕನ್ನಡಿಗ ರಾಹುಲ್ ಅವರನ್ನು ತನ್ನದಾಗಿಸಿಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News