ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ | ಗುಜರಾತ್ ವೇಗಿ ಇಶಾಂತ್ ಶರ್ಮಾಗೆ ದಂಡ

ಇಶಾಂತ್ ಶರ್ಮಾ | PC : X
ಹೊಸದಿಲ್ಲಿ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಗುಜರಾತ್ ಟೈಟಾನ್ಸ್ ಬೌಲರ್ ಇಶಾಂತ್ ಶರ್ಮಾಗೆ ಅವರ ಪಂದ್ಯಶುಲ್ಕದಲ್ಲಿ ಶೇ.25ರಷ್ಟು ದಂಡ ವಿಧಿಸಲಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಗುಜರಾತ್ ಟೈಟಾನ್ಸ್ ಬೌಲರ್ ಇಶಾಂತ್ ಶರ್ಮಾಗೆ ಅವರ ಪಂದ್ಯಶುಲ್ಕದಲ್ಲಿ ಶೇ.25ರಷ್ಟು ದಂಡ ವಿಧಿಸಲಾಗಿದೆ. ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಆರ್ಟಿಕಲ್ 2.2ರಡಿ ಲೆವೆಲ್ 1 ಅನ್ನು ಉಲ್ಲಂಘಿಸಿರುವುದನ್ನು ಇಶಾಂತ್ ಶರ್ಮಾ ಒಪ್ಪಿಕೊಂಡಿದ್ದಾರೆ. ನೀತಿ ಸಂಹಿತೆಯ ಲೆವೆಲ್-1ರ ಉಲ್ಲಂಘನೆಗೆ ಮ್ಯಾಚ್ ರೆಫರಿಯ ನಿರ್ಧಾರವೇ ಅಂತಿಮ ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇಶಾಂತ್ ಶರ್ಮಾ ಹೈದರಾಬಾದ್ ವಿರುದ್ಧ 4 ಓವರ್‌ಗಳಲ್ಲಿ 53 ರನ್ ಬಿಟ್ಟುಕೊಟ್ಟಿದ್ದರು. ಮೂರು ಪಂದ್ಯಗಳಲ್ಲಿ 12.13 ಇಕಾನಮಿ ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟಿರುವ ಇಶಾಂತ್ ಕೇವಲ 1 ವಿಕೆಟ್ ಪಡೆದಿದ್ದಾರೆ.