ಆಸ್ಪತ್ರೆಗೆ ದಾಖಲಾದ ಹೈದರಾಬಾದ್ ವೇಗಿ ಹರ್ಷಲ್ ಪಟೇಲ್

ಹರ್ಷಲ್ ಪಟೇಲ್ | PC : PTI
ಹೊಸದಿಲ್ಲಿ: ಗುಜರಾತ್ ಟೈಟಾನ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯಕ್ಕಿಂತ ಮೊದಲು ಸನ್ ರೈಸರ್ಸ್ ಹೈದರಾಬಾದ್ ತಂಡವು ತೀವ್ರ ಹಿನ್ನಡೆ ಅನುಭವಿಸಿತು. ತಂಡದ ಸ್ಟಾರ್ ವೇಗದ ಬೌಲರ್ ಹರ್ಷಲ್ ಪಟೇಲ್ ಅವರು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹರ್ಷಲ್ ಪಂದ್ಯದಿಂದ ವಂಚಿತರಾಗಿದ್ದಾರೆ ಎಂದು ನಾಯಕ ಪ್ಯಾಟ್ ಕಮಿನ್ಸ್ ಖಚಿತಪಡಿಸಿದರು. ಪಟೇಲ್ ಬದಲಿಗೆ ಜಯದೇವ್ ಉನದ್ಕಟ್ ಆಡುವ 11ರ ಬಳಗಕ್ಕೆ ಸೇರ್ಪಡೆಯಾದರು.
ಸದ್ಯ ಕಾಮೆಂಟರಿ ಪ್ಯಾನೆಲ್ ನಲ್ಲಿರುವ ಭಾರತದ ಮಾಜಿ ವೇಗದ ಬೌಲರ್ ವರುಣ್ ಆ್ಯರೊನ್ ಅವರು ಪಟೇಲ್ ಆಸ್ಪತ್ರೆಗೆ ದಾಖಲಾದ ಸುದ್ದಿಯನ್ನು ದೃಢಪಡಿಸಿದರು.
ಬಲಗೈ ವೇಗಿ ಪಟೇಲ್ ಈ ಋತುವಿನಲ್ಲಿ 4 ಪಂದ್ಯಗಳಲ್ಲಿ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಸನ್ ರೈಸರ್ಸ್ ತಂಡದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿದ್ದಾರೆ.
ಟಾಸ್ ಜಯಿಸಿದ ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ದುಕೊಂಡರು. ಗುಜರಾತ್ ತಂಡವು ವೇಗದ ಬೌಲರ್ ಅರ್ಷದ್ ಖಾನ್ ಬದಲಿಗೆ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಗೆ ಅವಕಾಶ ನೀಡಿದೆ. ಸುಂದರ್ ಅವರು ಗುಜರಾತ್ ಪರ ಚೊಚ್ಚಲ ಪಂದ್ಯ ಆಡಿದ್ದಾರೆ.