ಶುಭಮನ್ ಅರ್ಧ ಶತಕ; ಹೈದರಾಬಾದ್ ವಿರುದ್ಧ ಗುಜರಾತ್ ಗೆ ಗೆಲುವಿನ ಸಿ'ರಾಜ'

PC | @IPL
ಹೈದರಾಬಾದ್ : ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ ಗುಜರಾತ್ 7 ವಿಕೆಟ್‌ಗಳ ಜಯ ಸಾಧಿಸಿದೆ.
ಇದಕ್ಕೂ ಮುನ್ನ ವೇಗದ ಬೌಲರ್ ಮುಹಮ್ಮದ್ ಸಿರಾಜ್(4-17) ನೇತೃತ್ವದ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 152 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ರವಿವಾರ ಐಪಿಎಲ್ ಟೂರ್ನಿಯ 19ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಶಕ್ತವಾಯಿತು.
ಹೈದರಾಬಾದ್ ತಂಡ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್(8 ರನ್)ವಿಕೆಟನ್ನು ಕಳೆದುಕೊಂಡಿತು. ಮುಹಮ್ಮದ್ ಸಿರಾಜ್ ಅವರು ಹೆಡ್ ವಿಕೆಟನ್ನು ಉರುಳಿಸಿ ಹೈದರಾಬಾದ್ ವಿಕೆಟ್ ಪತನಕ್ಕೆ ನಾಂದಿ ಹಾಡಿದರು. ಇನ್ನೋರ್ವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ(18 ರನ್)ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.
ಇಶಾನ್ ಕಿಶನ್(17 ರನ್) ಕಳಪೆ ಬ್ಯಾಟಿಂಗ್ ಮುಂದುವರಿಸಿದರು. ಆಗ 4ನೇ ವಿಕೆಟ್‌ಗೆ 50 ರನ್ ಜೊತೆಯಾಟದಲ್ಲಿ ಭಾಗಿಯಾದ ನಿತಿಶ್ ಕುಮಾರ್ ರೆಡ್ಡಿ ಹಾಗೂ ಕ್ಲಾಸೆನ್(27 ರನ್) ತಂಡವನ್ನು ಆಧರಿಸಿದರು. ಈ ಇಬ್ಬರ ನಂತರ ದೊಡ್ಡ ಜೊತೆಯಾಟ ಮೂಡಿಬರಲಿಲ್ಲ.
ನಿತಿಶ್ ರೆಡ್ಡಿ(31 ರನ್, 34 ಎಸೆತ)ಹೈದರಾಬಾದ್ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಅನಿಕೇತ್ ವರ್ಮಾ(18 ರನ್)ಹಾಗೂ ನಾಯಕ ಪ್ಯಾಟ್ ಕಮಿನ್ಸ್(ಔಟಾಗದೆ 22)ಎರಡಂಕೆಯ ಸ್ಕೋರ್ ಗಳಿಸಿದರು.
ಸಿರಾಜ್‌ಗೆ ಸಾಯಿ ಕಿಶೋರ್(2-24) ಹಾಗೂ ಪ್ರಸಿದ್ಧ ಕೃಷ್ಣ(2-25)ತಲಾ ಎರಡು ವಿಕೆಟ್‌ಗಳನ್ನು ಪಡೆದು ಸಾಥ್ ನೀಡಿದರು.