ತನ್ನ ಮೊದಲ ಓವರ್ ನಲ್ಲೇ ಗಂಟೆಗೆ 140 ಕಿ.ಮೀ.ವೇಗದಲ್ಲಿ ಬುಮ್ರಾ ಬೌಲಿಂಗ್!

ಜಸ್‌ಪ್ರಿತ್ ಬುಮ್ರಾ | PC ; PTI
ಮುಂಬೈ: ಗಾಯದ ಸಮಸ್ಯೆಯಿಂದಾಗಿ 93 ದಿನಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟಿಗೆ ಅಬ್ಬರದಿಂದ ಪುನರಾರಂಭ ಮಾಡಿರುವ ಜಸ್‌ಪ್ರಿತ್ ಬುಮ್ರಾ ಆರ್‌ಸಿಬಿ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ತಾನೆಸೆದ ಮೊದಲ ಓವರ್‌ನಲ್ಲೇ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ.
ಇನಿಂಗ್ಸ್‌ನ 4ನೇ ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿದ ವೇಗದ ಬೌಲರ್ ಬುಮ್ರಾ ಹೆಚ್ಚುಕಡಿಮೆ ಪ್ರತೀ ಎಸೆತವನ್ನು ಗಂಟೆಗೆ 140 ಕಿ.ಮೀ. ವೇಗದಲ್ಲಿ ಎಸೆದಿದ್ದು, ದೀರ್ಘ ವಿರಾಮದಿಂದ ತನ್ನ ಬೌಲಿಂಗ್ ಮೊನಚು ಕಳೆದುಕೊಂಡ ಯಾವುದೇ ಲಕ್ಷಣವನ್ನು ತೋರ್ಪಡಿಸಿಲ್ಲ.
ವಿರಾಟ್ ಕೊಹ್ಲಿ ತನ್ನ ದೀರ್ಘಕಾಲದ ಸಹ ಆಟಗಾರನನ್ನು ಎದುರಿಸಿದ್ದು, ಎರಡನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿದರು. ಆದರೆ ಓವರ್‌ನ ಉಳಿದ ಎಸೆತಗಳಲ್ಲಿ ಬುಮ್ರಾ ಮೊನಚಿನ ದಾಳಿ ನಡೆಸಿ ಆರು ಎಸೆತಗಳಲ್ಲಿ ಒಟ್ಟು 10 ರನ್ ನೀಡಿದರು.
ಬುಮ್ರಾ ಅವರ ಮರಳಿಕೆಯು ಮುಂಬೈ ಇಂಡಿಯನ್ಸ್ ಹಾಗೂ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಹುಮ್ಮಸ್ಸು ತಂದಿದೆ.