ಭಾರತದ ಸಬ್ ಜೂನಿಯರ್ ತಂಡಗಳಿಗೆ ಕೋಚ್ ಆಗಿ ರಾಣಿ ರಾಂಪಾಲ್, ಸರ್ದಾರ್ ಸಿಂಗ್ ನೇಮಕ
ಚೆನ್ನೈ: ಸರ್ದಾರ್ ಸಿಂಗ್ ಹಾಗೂ ರಾಣಿ ರಾಂಪಾಲ್ ಅವರನ್ನು ಕ್ರಮವಾಗಿ ಅಂಡರ್-17 ಬಾಲಕರ ಹಾಗೂ ಬಾಲಕಿಯರ ತಂಡಗಳ ಕೋಚ್ ಆಗಿ ಹಾಕಿ ಇಂಡಿಯಾ ಬುಧವಾರ ನೇಮಕ ಮಾಡಿದೆ ಎಂದು ಫೆಡರೇಶನ್ ಘೋಷಿಸಿದೆ.
ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ ಹಾಗೂ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಇಬ್ಬರು ಲೆಜೆಂಡ್ಗಳು ಹಾಕಿ ಇಂಡಿಯಾ ನೀಡಿದ್ದ ಆಫರ್ಗಳನ್ನು ಸ್ವೀಕರಿಸಿದ್ದರು.
ಸರ್ದಾರ್ 2014ರ ಏಶ್ಯನ್ ಗೇಮ್ಸ್ನಲ್ಲಿ ಭಾರತ ತಂಡ ಚಿನ್ನ ಗೆಲ್ಲುವಲ್ಲಿ ತಂಡದ ನೇತೃತ್ವವಹಿಸಿದ್ದರು. ಮಾಜಿ ನಾಯಕಿ ರಾಣಿ ರಾಂಪಾಲ್ ಪ್ರಸಕ್ತ ರಾಷ್ಟ್ರೀಯ ತಂಡದ ಭಾಗವಾಗಿಲ್ಲ. ಎನ್ಐಎಸ್ ಪಟಿಯಾಲದಲ್ಲಿ ಭಾರತದ ಕ್ರೀಡಾ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ.
ರಾಣಿ ಇನ್ನೂ ಹಾಕಿಯಿಂದ ನಿವೃತ್ತಿಯಾಗಿಲ್ಲ. ಅವರು ರಾಷ್ಟ್ರೀಯ ತಂಡದಲ್ಲೂ ಇಲ್ಲ. ಹಾಕಿ ಇಂಡಿಯಾ ನೀಡಿರುವ ಆಫರನ್ನು ಒಪ್ಪಿಕೊಂಡಿರುವುದು ಅವರು ಹಾಕಿಯಿಂದ ನಿವೃತ್ತಿಯಾಗಿದ್ದಾರೆಂದು ಅರ್ಥವಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸತಾಗಿ ಆರಂಭಿಸಿರುವ ಸಬ್-ಜೂನಿಯರ್ ಕಾರ್ಯಕ್ರಮವು ಮೂರು ವರ್ಷಗಳ ಅವಧಿಯದ್ದಾಗಿದೆ.