ಜನರ ಭಾವನೆಗಳನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಪತ್ರಕರ್ತರು ಮಾಡಬೇಕು: ಸ್ಪೀಕರ್ ಯು.ಟಿ.ಖಾದರ್

Update: 2023-09-10 18:33 GMT

ಬೆಂಗಳೂರು, ಸೆ.10: ಜನಸಾಮಾನ್ಯರ ಭಾವನೆಗಳನ್ನು ಸರಕಾರ ಮತ್ತು ಅಧಿಕಾರಿಗಳಿಗೆ ಮುಟ್ಟಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕಾಗುತ್ತದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮೀಡಿಯಾ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ ವತಿಯಿಂದ ಕರ್ನಾಟಕ ಮಹಿಳಾ ಯಕ್ಷಗಾನ ಸಹಯೋಗದಲ್ಲಿ ಆಯೋಜಿಸಿದ್ದ ಮಾಮ್ ಇನ್‍ಸ್ಪೈರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸುದ್ದಿಯಾಗುವಂತಹ ಸಂಗತಿಗಳು ಸುದ್ದಿಯಾಗಬೇಕೆ ಹೊರತು, ಜಾಲತಾಣಗಳ ವಿಷಯಗಳು ಸುದ್ದಿಯಾಗಬಾರದು. ಈ ನಿಟ್ಟಿನಲ್ಲಿ ಯುವ ಪತ್ರಕರ್ತರು ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಸಮರ್ಪಕವಾಗಿ ಪ್ರಶ್ನಿಸುವಂತಾಗುವ ಸಾಮಥ್ರ್ಯ ಹೊಂದಬೇಕು. ಮಾಧ್ಯಮ ಕ್ಷೇತ್ರಕ್ಕೆ ಹೊಸದಾಗಿ ಹೆಜ್ಜೆಯಿಡುವ ಯುವಕರಿಗೆ ಸಂಬಂಧಿಸಿದ ಸಂಸ್ಥೆಗಳು ಸೂಕ್ತ ತರಬೇತಿ ನೀಡಿ ಸಜ್ಜುಗೊಳಿಸುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.

ವಿಷಯ ತಿಳಿಯದೇ ಪ್ರಶ್ನಿಸುವ ಪತ್ರಕರ್ತರನ್ನು ಕಾಣುತ್ತಿದ್ದೇವೆ. ಐದಾರು ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ ಬಳಿಕ ಈ ಉದ್ಯೋಗ ಸಾಕಾಗಿ ಮಾಧ್ಯಮ ಕ್ಷೇತ್ರದಿಂದಲೇ ಹೊರಹೋಗುವುದನ್ನೂ ನೋಡಿz್ದÉೀವೆ. ಜೊತೆಗೆ ಪತ್ರಿಕಾ ಕಚೇರಿಯ ಮುಖ್ಯಸ್ಥರಾಗುವುದೂ ಸುಲಭದ ಮಾತಲ್ಲ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಹಿರಿಯ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಬರುವ ಹೊಸಬರಿಗೆ ಸೂಕ್ತ ತರಬೇತಿ ನೀಡುವುದು ಅಗತ್ಯ ಎಂದು ಯು.ಟಿ.ಖಾದರ್ ಹೇಳಿದರು.

ಮಾಮ್‍ನ ಗೌರವಾಧ್ಯಕ್ಷ ವೇಣು ಶರ್ಮಾ ಮಾತನಾಡಿ, ‘ಕೆಲವು ಸಮಾನ ಮನಸ್ಕರೆಲ್ಲ ಸೇರಿಕೊಂಡು ಮಾಮ್ ಸಂಸ್ಥೆಯನ್ನು ಕಟ್ಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ಸಂಸ್ಥೆ 24 ವರ್ಷಗಳನ್ನು ಮುಗಿಸಿದ್ದು, ಮುಂದಿನ ವರ್ಷ ಅತಿದೊಡ್ಡ ಕಾರ್ಯಕ್ರಮವನ್ನು ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದರು.

ಕೆ.ಆರ್.ಪುರ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ ಪಾಶ್ರ್ವನಾಥ್ ಮಾತನಾಡಿ, ಮಾಮ್ ಸಂಸ್ಥೆ ಬರಿ ಮಂಗಳೂರು ವಿಶ್ವವಿದ್ಯಾನಿಲಯಕ್ಕಷ್ಟೇ ಸೀಮಿತವಾಗಿರದೇ ಕರ್ನಾಟಕದ ಎಲ್ಲ ಕಾಲೇಜು, ವಿದ್ಯಾಸಂಸ್ಥೆಗಳನ್ನು ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ `ಯಕ್ಷಗಾನ-ಮಹಿಳೆ-ಮಾಧ್ಯಮ' ಕುರಿತು ಚಿಂತನ ಮಂಥನ ನಡೆಯಿತು. ರಶ್ಮಿ ಯಾದವ್, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಯಕ್ಷಿತಾ, ಶಾಮ ಪ್ರಸಾದ್, ನವ್ಯಶ್ರೀ ಶೆಟ್ಟಿ, ಚೈತ್ರಾ, ಸ್ವಸ್ತಿಕ್ ಕನ್ಯಾಡಿ ಇಂದೂಧರ ಹಳೆಯಂಗಡಿ, ನಳಿನಿ ಅವರಿಗೆ `ಮಾಮ್ ಇನ್‍ಸ್ಪೈರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಕಲಾದರ್ಶಿನಿ ನಿರ್ದೇಶಕ ಶ್ರೀನಿವಾಸ್ ಸಾಸ್ತಾನ, ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ, ನವಿತಾ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News