ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ: ಸದನದಲ್ಲಿ ಲಕ್ಷ್ಮಣ ಸವದಿ ಅಚ್ಚರಿಯ ಹೇಳಿಕೆ

Update: 2023-07-12 10:14 GMT

ಬೆಂಗಳೂರು: 'ವಿರೋಧ ಪಕ್ಷದ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ' ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಬುಧವಾರ ಸದನದಲ್ಲಿ ‌ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಸದಸ್ಯ ಜಿಟಿ ದೇವೇಗೌಡ ಮಾತನಾಡುತ್ತಾ, ಬಿಎಸ್ ಯಡಿಯೂರಪ್ಪ ಅವರನ್ನ ಅಧಿಕಾರದಿಂದ ಇಳಿಸಿದ್ರು. ಆದರೆ ಅವರನ್ನು ಯಾಕೆ ಇಳಿಸಿದ್ರು ಅನ್ನೋದು ಗೊತ್ತಿಲ್ಲ.‌ ನರೇಂದ್ರ ಮೋದಿಯವರು ಬಿಟ್ರೆ ಯಾರಿಗೂ ಗೊತ್ತಿಲ್ಲ. ಲಕ್ಷ್ಮಣ್ ಸವದಿ ಅವರು ಉಪ ಮುಖ್ಯಮಂತ್ರಿ ಆಗಿದ್ದರು. ಸವದಿ ಅವರೇ ನಿಮಿಗಾದ್ರೂ ಗೊತ್ತಾ? ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಲಕ್ಷ್ಮಣ ಸವದಿ,‌ ಬಿಎಸ್ ವೈ ಅವರನ್ನ ಯಾಕೆ ಇಳಿಸಿದ್ರು ಹೇಗೆ ಇಳಿಸಿದ್ರು ಅನ್ನೋದು ನಮಗಿಂತ ಹೆಚ್ಚು ನಿಮಗೆ ಗೊತ್ತಿದೆ. ನೀವು ಹೇಳ್ತಾ ಇಲ್ಲ ಅಷ್ಟೇ. ಆದರೆ ವಿರೋಧ ಪಕ್ಷದ ನಾಯಕ ಇಲ್ಲ ಅಂತ ಹೇಳುತ್ತಿದ್ದೀರಲ್ವಾ?,‌ ಅದಕ್ಕೋಸ್ಕರನೇ ಎರಡನೇ ಸೀಟ್ ನಲ್ಲಿ ಯಾರೂ ಕೂರುತ್ತಿಲ್ಲ. ಆ ಸ್ಥಾನಕ್ಕಾಗಿ ಬಹಳ ಕಚ್ಚಾಡ್ತಾ ಇದ್ದಾರೆ ಆದರೆ ಪ್ರಯೋಜನ ಇಲ್ಲ. ಕುಮಾರಸ್ವಾಮಿ ಅವರು ಮಾತ್ರ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡ್ತಾ ಇದ್ದಾರೆ. ಅದಕ್ಕಾಗಿಯೇ ಇನ್ನೂ ಆಯ್ಕೆ ಮಾಡಿಲ್ಲ ಅಂತ ಹೊರಗೆ ಚರ್ಚೆ ನಡೀತಾ ಇದೆ ಎಂದರು.

'ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರನ್ನೇ ಅಧಿಕೃತವಾಗಿ ನಿಯೋಜನೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿರುವುದಾಗಿ ನನಗೆ ಹಳೆ ಪಕ್ಷ ಬಿಜೆಪಿಯ ಕೆಲವು ಸ್ನೇಹಿತರು ಹೇಳಿದರು ಎಂದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News