ಶಾಸಕರ ತರಬೇತಿ ಶಿಬಿರಕ್ಕೆ ಕರ್ಜಗಿ, ರವಿಶಂಕರ್ ಗುರೂಜಿ ಇಲ್ಲ

Update: 2023-06-24 16:45 GMT

ಬೆಂಗಳೂರು, ಜೂ. 24 : ನೂತನ ಶಾಸಕರಿಗೆ ಆಯೋಜಿಸಿರುವ ಮೂರು ದಿನಗಳ ತರಬೇತಿ ಶಿಬಿರದ ಅಧಿಕೃತ ವಿವರಗಳ ಪಟ್ಟಿ ಪ್ರಕಟವಾಗಿದ್ದು ಭಾಷಣಕಾರರ ಪಟ್ಟಿಯಲ್ಲಿ ಡಾ. ಗುರುರಾಜ ಕರ್ಜಗಿ ಹಾಗು ರವಿಶಂಕರ್ ಗುರೂಜಿ ಅವರ ಹೆಸರು ಅದರಲ್ಲಿಲ್ಲ. ಅಲ್ಲಿಗೆ ಅವರಿಬ್ಬರು ಈ ಶಿಬಿರದಲ್ಲಿ ಭಾಗವಹಿಸಿ ನೂತನ ಶಾಸಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿಲ್ಲ ಎಂಬುದು ಖಚಿತವಾಗಿದೆ.

ತರಬೇತಿ ಶಿಬಿರದಲ್ಲಿ ಶಾಸಕರಿಗೆ ಮೋಟಿವೇಷನ್ ಗಾಗಿ ಭಾಷಣ ಮಾಡಲು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸಂಸದರಾದ ಡಾ. ವೀರೇಂದ್ರ ಹೆಗ್ಗಡೆ, ಜಮಾತೆ ಇಸ್ಲಾಮಿ ಹಿಂದ್ ನ ಮೊಹಮ್ಮದ್ ಕುಂಞ, ಬ್ರಹ್ಮ ಕುಮಾರಿ ಸಂಘಟನೆಯ ಪ್ರತಿನಿಧಿ, ಡಾ. ಗುರುರಾಜ್ ಕರ್ಜಗಿ ಹಾಗು ರವಿಶಂಕರ್ ಗುರೂಜಿ ಅವರು ಭಾಗವಹಿಸುತ್ತಾರೆ ಎಂದು ಸ್ಪೀಕರ್ ಯು ಟಿ ಖಾದರ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ ಬಳಿಕ ರಾಜ್ಯಾದ್ಯಂತ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಬುದ್ಧಿಜೀವಿಗಳು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಹಾಗು ಕಾಂಗ್ರೆಸ್ ಮುಖಂಡರೂ ಇದನ್ನು ಖಂಡಿಸಿ ಅವರಿಗೆ ನೀಡಿದ ಆಹ್ವಾನವನ್ನು ವಾಪಸ್ ಪಡೆಯಬೇಕು. ಶಾಸಕರಿಗೆ ಸಂವಿಧಾನದ ಪಾಠ ಹೇಳಿಸಬೇಕೇ ವಿನಃ ವಿವಾದಾತ್ಮಕ ವ್ಯಕ್ತಿಗಳಿಂದ ಭಾಷಣ ಮಾಡಿಸುವುದು ಸರಿಯಲ್ಲ ಎಂದು ಹೇಳಿದ್ದರು. ವಿಶೇಷವಾಗಿ ಗುರುರಾಜ್ ಕರ್ಜಗಿ ಹಾಗು ರವಿಶಂಕರ್ ಗುರೂಜಿ ಅವರನ್ನು ಕರೆದಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಕಾರ್ಯಕ್ರಮ ಮುಗಿದ ಮೇಲೆ ಈ ಬಗ್ಗೆ ಹೇಳಬೇಕೇ ವಿನಃ ಮೊದಲೇ ಪೂರ್ವಗ್ರಹ ಪೀಡಿತ ಹೇಳಿಕೆ ನೀಡುವುದು ಸರಿಯಲ್ಲ ಎಂದು ಖಾದರ್ ಹೇಳಿದ್ದರು.

ಈಗ ಕರ್ಜಗಿ ಹಾಗು ರವಿಶಂಕರ್ ಗುರೂಜಿ ಅವರನ್ನು ಕೈಬಿಟ್ಟಿರುವುದು ಖಚಿತವಾಗಿದೆ.

 

 

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News