ಇಸ್ರೋ ಪಿಎಸ್ಎಲ್ ವಿ-ಸಿ56 ಮೂಲಕ ಸಿಂಗಾಪುರದ ಭೂ ಸರ್ವೇಕ್ಷಣಾ ಉಪಗ್ರಹ ಉಡಾವಣೆ ಯಶಸ್ವಿ

Update: 2023-07-30 04:54 GMT

ಶ್ರೀಹರಿಕೋಟಾ: ಸಿಂಗಾಪುರದ ಭೂ ಸರ್ವೇಕ್ಷಣಾ ಉಪಗ್ರಹ ಡಿಎಸ್-ಎಸ್ಎಆರ್ ಹಾಗೂ ಆರು ಇತರ ಉಪಗ್ರಹಗಳನ್ನು ಇಸ್ರೋದ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ)ಸಿ56, ಇಂದು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಯಶಸ್ವಿಯಾಗಿ ಉಡಾಯಿಸಿದೆ.

ಸಿಂಗಾಪುರ ಸರ್ಕಾರದ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಏಜೆನ್ಸಿ ಮತ್ತು ಎಸ್ಟಿ ಎಂಜಿನಿಯರಿಂಗ್ ಜಂಟಿಯಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದವು. ಇದನ್ನು ಸಮಭಾಜಕ ಕಕ್ಷೆಯ ಸನಿಹದಲ್ಲಿ 5 ಡಿಗ್ರಿ ಕೋನದಲ್ಲಿ 535 ಅಕ್ಷಾಂಶದಲ್ಲಿ ಇರಿಸಲಾಗುತ್ತದೆ.

ಇದನ್ನು ನಿಯೋಜಿಸಿ ಇದು ಕಾರ್ಯಾಚರಣೆ ಆರಂಭಿಸಿದ ಬಳಿಕ ಡಿಎಸ್-ಎಸ್ಎಆರ್ ಉಪಗ್ರವನ್ನು ಉಪಗ್ರಹ ಚಿತ್ರ ಅಗತ್ಯತೆಗಳಿಗೆ ಸಿಂಗಾಪುರ ಸರ್ಕಾರ ಬಳಸಿಕೊಳ್ಳಲಿದೆ ಎಂದು ಇಸ್ರೊ ಹೇಳಿದೆ. ಇದರ ಜತೆಗೆ ಆರು ಇತರ ಉಪಗ್ರಹಗಳನ್ನು ಕೂಡಾ ಯಶಸ್ವಿಯಾಗಿ ಉಡಾಯಿಸಲಾಗಿದೆ.

23 ಕೆಜಿ ತೂಕದ ಟೆಕ್ನಾಲಜಿ ಡೆಮಾನ್ಸ್ಟ್ರೇಷನ್ ಮೈಕ್ರೊ ಸೆಟಲೈಟ್ ವೆಲಾಕ್ಸ್-ಎಎಂ, ಆರ್ಕೇಡ್ ಅಟ್ಮಾಸ್ಪಿಯರಿಕ್ ಕಪಲಿಂಗ್ ಅಂಡ್ ಡೈನಾಮಿಕ್ಸ್ ಎಕ್ಸ್ಪ್ಲೋರರ್ ಎಂಬ ಪ್ರಯೋಗಾತ್ಮಕ ಉಪಗ್ರಹ, 3ಯು ನ್ಯಾನೊಸೆಟಲೈಟ್, ನಗರ ಹಾಗೂ ಗುಡ್ಡಗಾಡು ಪ್ರದೇಶಕ್ಕೆ ಎಲ್ಓಟಿ ಸಂಪರ್ಕ ಕಲ್ಪಿಸುವ ಅತ್ಯಾಧುನಿಕ 3ಯು ನ್ಯಾನೊ ಉಪಗ್ರಹ ನ್ಯೂಸ್ಪೇಸ್ನ ಎನ್ಯುಎಲ್ಐಓಎನ್, ಭೂಮಿಯ ಕೆಳಕಕ್ಷೆಯಲ್ಲಿ ಕಾರ್ಯನಿರ್ವಹಿಸುವ 3ಯು ನ್ಯಾನೊ ಉಪಗ್ರಹ ಗ್ಲಾಸಿಯಾ-2 ಹಾಗೂ ಅಂತರರಾಷ್ಟ್ರೀಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಓಆರ್ಬಿ-12 ಸ್ಟ್ರೈಡರ್ ಕೂಡಾ ಯಶಸ್ವಿಯಾಗಿ ಉಡಾವಣೆಗೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News