ವಿಧಾನಸೌಧ ಪ್ರವೇಶ ದ್ವಾರದ ಸೌಂದರ್ಯ ಹೆಚ್ಚಿಸಲು ಚಿಂತನೆ: ಸ್ಪೀಕರ್ ಯು.ಟಿ.ಖಾದರ್

Update: 2023-09-22 16:45 GMT

ಬೆಂಗಳೂರು, ಸೆ.22: ವಿಧಾನಸೌಧದ ಮುಂಭಾಗ ಹಾಗೂ ಪಶ್ಚಿಮ ದ್ವಾರದ ಸೌಂದರ್ಯ ಇನ್ನಷ್ಟು ಹೆಚ್ಚಾಗುವಂತೆ ವಿನ್ಯಾಸ ಬದಲಾವಣೆ ಮಾಡುವ ಚಿಂತನೆ ಇದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, sವಿಧಾನಸೌಧಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಅವರಿಗೆ ಪ್ರವೇಶದ್ವಾರಗಳು ಹೆಚ್ಚು ಆಕರ್ಷಕವಾಗಿ, ಸೌಂದರ್ಯಯುತವಾಗಿ ಇರಬೇಕೆಂಬುದು ನಮ್ಮ ಉದ್ದೇಶ ಎಂದರು.

ಅದರಲ್ಲೂ, ವಿಧಾನಸೌಧದ ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿರುವ ಕಬ್ಬಿಣದ ಗ್ರಿಲ್‍ಗಳನ್ನು ತೆಗೆದು ಆಕರ್ಷಿತವಾಗಿ ಅಂದವಾಗಿ ಕಾಣುವಂತೆ ಮರದಲ್ಲಿ ಕೆತ್ತನೆ ಮಾಡಿದ ವಿನ್ಯಾಸವನ್ನು ಅಳವಡಿಸುವ ಉದ್ದೇಶವಿದೆ.ಈ ಕುರಿತು ಪರಿಣಿತ ಶಿಲ್ಪಿಗಳ ಅಭಿಪ್ರಾಯ ಪಡೆಯಲಾಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ ಎದು ನುಡಿದರು.

ಪ್ರವೇಶದ್ವಾರದ ಒಂದು ಬದಿಯಲ್ಲಿ ಸಂವಿಧಾನ ಪೀಠಿಕೆಯ ಫಲಕವನ್ನು ಪ್ರದರ್ಶಿಸಬೇಕು ಹಾಗೂ ಮತ್ತೊಂದು ಭಾಗದಲ್ಲಿ ನಾಡಗೀತೆಯನ್ನು ಪ್ರದರ್ಶಿಸಬೇಕೆಂಬ ಸಲಹೆ ಬಂದಿದ್ದು, ಸದ್ಯಕ್ಕೆ ಅಂತಿಮ ನಿರ್ಧಾರವಾಗಿಲ್ಲ ಎಂದು ಖಾದರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News