ತುಮಕೂರು | ಅಕ್ರಮ ಮಧ್ಯ ಮಾರಾಟದ ಬಗ್ಗೆ ದೂರು ನೀಡಿದ ಗ್ರಾಮಸ್ಥರಿಗೆ ಸವರ್ಣಿಯರಿಂದ ಬಹಿಷ್ಕಾರ: ಆರೋಪ

Update: 2023-10-28 16:34 GMT

ಚಿತ್ರ- PTI (ಸಾಂದರರ್ಭಿಕ)

ತುಮಕೂರು:  ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅದರಿಂದ ಬೇಸತ್ತ ಗ್ರಾಮಸ್ಥರು ಅಕ್ರಮ ಮಧ್ಯ ಮಾರಾಟ ತಡೆಗಟ್ಟಲು ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಸವರ್ಣಿಯರು ಬಹಿಷ್ಕಾರ ಹಾಕಿರುವ ಘಟನೆ ವರದಿಯಾಗಿದೆ.

ಇಂತಹದೊಂದು ಅಮಾನೀಯ ಘಟನೆ ವರದಿಯಾಗಿರುವುದು ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಇನ್ನು ತಾಲೂಕಿನ ಹುಲಿಕುಂಟೆ ಹೋಬಳಿಯ ನಾರಗೊಂಡನಹಳ್ಳಿಯಲ್ಲಿ ಇಂತಹದೊಂದು ಅಮಾನವೀಯ ಘಟನೆ ವರದಿಯಾಗಿದೆ. 

ಕಳೆದ ಕೆಲವು ವರ್ಷಗಳಿಂದ ಗ್ರಾಮದಲ್ಲಿ ಅಕ್ರಮವಾಗಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ಗ್ರಾಮದ ಯುವಕರು ದಾರಿ ತಪ್ಪಿ ಬಡ ಕುಟುಂಬಗಳು ಕಣ್ಣೀರು ಹಾಕುವಂಥ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತ ಕೆಲ ಹಿರಿಯರು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ಚಟುವಟಿಕೆ ನಿಲ್ಲಿಸಲು ಕಳೆದ ಕೆಲ ದಿನಗಳ ಹಿಂದೆ ಅಬಕಾರಿ ಇಲಾಖೆಗೆ ದೂರು ನೀಡಿದ್ದರು.

ಇದರಿಂದ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಕೆಲ ಮಂದಿಯ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಾಸವಾಗಿರುವ ದಲಿತ ಕುಟುಂಬಗಳಿಗೆ ಗ್ರಾಮದಲ್ಲಿನ ಅಂಗಡಿಗಳಲ್ಲಿ ದಿನ ನಿತ್ಯ ಬಳಕೆಯ ವಸ್ತುಗಳನ್ನ ನೀಡದೆ ನಿರಾಕರಿಸಿ ತಮ್ಮ ಹೇಯ ಕೃತ್ಯ ಪ್ರದರ್ಶಿಸಿದ ಸವರ್ಣಿಯರ ವಿರುದ್ಧ ಕೆಲ ದಲಿತ ಕುಟುಂಬಗಳು ತೀವ್ರ ಆಕ್ರೋಶ ಹೊರಹಾಕಿವೆ ಎನ್ನಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮದ ಮಹಿಳೆ ಕರಿಯಮ್ಮ, ʼನಮ್ಮ ಗ್ರಾಮದಲ್ಲಿ ಹಲವು ವರ್ಷಗಳಿಂದ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಇದರಿಂದ ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿನ ಹಲವು ಅಂಗಡಿಗಳಲ್ಲಿ ದಲಿತರಿಗೆ ಯಾವುದೇ ದಿನ ನಿತ್ಯ ಬಳಕೆಯ ವಸ್ತುಗಳನ್ನ ನೀಡದೆ ನಮ್ಮನ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆʼ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.

ಅದೇನೇ ಇರಲಿ ಮಾಡುತ್ತಿರುವುದು ಅಕ್ರಮ ಚಟುವಟಿಕೆಯಾದರು, ಇದರ ಬಗ್ಗೆ ದೂರು ನೀಡಿದ ಗ್ರಾಮಸ್ಥರಿಗೆ ಅದೇ ಗ್ರಾಮದ ಕೆಲ ಮಂದಿಗಳು ದಲಿತರಿಗೆ ಬಹಿಷ್ಕಾರ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News