ದಾವಣಗೆರೆ | ಅನೈತಿಕ ಸಂಬಂಧ ಆರೋಪ; ನಡುರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ: ಆರು ಮಂದಿಯ ಬಂಧನ

Update: 2025-04-15 13:43 IST
ದಾವಣಗೆರೆ | ಅನೈತಿಕ ಸಂಬಂಧ ಆರೋಪ; ನಡುರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ: ಆರು ಮಂದಿಯ ಬಂಧನ
ಬಂಧಿತ ಆರೋಪಿಗಳು
  • whatsapp icon

ದಾವಣಗೆರೆ : ಅನೈತಿಕ ಸಂಬಂಧ ಆರೋಪದ ಕುರಿತು ಪಂಚಾಯಿತಿ ನಡೆಸುವ ವೇಳೆ ಮಹಿಳೆಯ ಮೇಲೆ ನಡುರಸ್ತೆಯಲ್ಲೇ ಸಾಮೂಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಮಹಿಳೆಯನ್ನು ಪಂಚಾಯಿತಿಗೆ ಮಸೀದಿಗೆ ಕರೆಸಿದ್ದರು. ಆಗ ಕಮಿಟಿಯ ಕೆಲವರು ಮಹಿಳೆಯನ್ನು ನಡುರಸ್ತೆಗೆ ಎಳೆದುತಂದು ಮನಬಂದಂತೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ.

ಈ ಸಂಬಂಧ ಹಲ್ಲೆ ನಡೆಸಿದ ಸ್ಥಳೀಯರಾದ ಮುಹಮ್ಮದ್ ನಯಾಝ್‌, ಮೊಹಮ್ಮದ್ ಗೌಸ್ ಪೀರ್ , ಚಾಂದ್ ಪೀರ್, ಇನಾಯಿತ್ ಉಲ್ಲಾ, ದಸ್ತಗೀರ್ ಹಾಗೂ ರಸೂಲ್ ಟಿಆರ್ ಎಂಬುವವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

ಪ್ರಕರಣ ಎ.9ರಂದು ನಡೆದಿದ್ದು, ಹಲ್ಲೆ ಮಾಡಿದ ವಿಡಿಯೋವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ನೊಂದ ಮಹಿಳೆ ಎ.11ರಂದು ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News