ಚನ್ನಗಿರಿ | ಬಾಲಕನಿಗೆ ಥಳಿತ ಪ್ರಕರಣ; 9 ಜನರ ಬಂಧನ

Update: 2025-04-08 00:29 IST
ಚನ್ನಗಿರಿ | ಬಾಲಕನಿಗೆ ಥಳಿತ ಪ್ರಕರಣ; 9 ಜನರ ಬಂಧನ
  • whatsapp icon

ದಾವಣಗೆರೆ : ಚನ್ನಗಿರಿ ತಾಲೂಕಿನ ನಲ್ಲೂರು ಸಮೀಪದ ಅಸ್ತಾಪನಹಳ್ಳಿ ಗ್ರಾಮದ ಬಾಲಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.

ಸುಭಾಷ್, ಲಕ್ಕಿ, ಪರುತು, ದರ್ಶನ್, ಶಿವದರ್ಶನ್, ಹರೀಶ್, ಪಟ್ಟಿ, ಭೂಣಿ, ಸುದನ್ ಬಂಧಿತ ಆರೋಪಿಗಳು.

ಕಳ್ಳತನ ಆರೋಪ ವಿಚಾರ ಸಂಬಂಧ ಆರೋಪಿಗಳು ಬಾಲಕನನ್ನು ಅಡಿಕೆ ಮರಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಆರೋಪಿಗಳ ಪತ್ತೆ ಕಾರ್ಯಾಚರಣೆಗಾಗಿ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯ ಕುಮಾರ್ ಸಂತೋಷ್, ಮಂಜುನಾಥ್, ಚನ್ನಗಿರಿ ಉಪ ವಿಭಾಗದ ಎಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಠಾಣೆ ಸಿಪಿಐ ರವೀಶ್ ನೇತೃತ್ವದಲ್ಲಿ ಠಾಣಾಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News