ದಾವಣಗೆರೆ | ಬಾಲಕನನ್ನು ಮರಕ್ಕೆ ಕಟ್ಟಿ ಗುಪ್ತಾಂಗಕ್ಕೆ ಇರುವೆ ಬಿಟ್ಟು ಹಲ್ಲೆ: ವಿಡಿಯೋ ವೈರಲ್‌

Update: 2025-04-06 13:03 IST
ದಾವಣಗೆರೆ | ಬಾಲಕನನ್ನು ಮರಕ್ಕೆ ಕಟ್ಟಿ ಗುಪ್ತಾಂಗಕ್ಕೆ ಇರುವೆ ಬಿಟ್ಟು ಹಲ್ಲೆ: ವಿಡಿಯೋ ವೈರಲ್‌
  • whatsapp icon

ದಾವಣಗೆರೆ : ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಬಾಲಕನನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿ, ಗುಪ್ತಾಂಗಗಳಿಗೆ ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರ ಬಳಿಯ ಅಸ್ತಾಪನಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ವಿಡಿಯೋ ವೈರಲ್‌ ಆಗಿದೆ.

ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಕ್ಕಿ- ಪಿಕ್ಕಿ ಜನಾಂಗದ ಬಾಲಕನ ಮೇಲೆ ಅದೇ ಜನಾಂಗದ 10 ರಿಂದ 15 ಜನ ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ. ದೊಣ್ಣೆ, ಡ್ರಿಪ್ ಪೈಪ್ ನಿಂದ ಹಲ್ಲೆ ಮಾಡಿದ್ದು, ಬಾಲಕ ಚೀರಾಡುತ್ತಿರುವುದು ವಿಡಿಯೋದಲ್ಲಿದೆ.

ಇದು ಕೆಲ ತಿಂಗಳ ಹಿಂದೆ ನಡೆದ ಘಟನೆ ಎನ್ನಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿರುವ ಸಾದ್ಯತೆ ಎಂದು ಹೇಳಲಾಗಿದೆ.

ಇಬ್ಬರು ಆರೋಪಿಗಳ ಬಂಧನ :

ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಬಾಲಕನ ತಾತ ನೀಡಿದ ದೂರಿನ ಮೇರೆಗೆ ಸದ್ಯ 9 ಯುವಕರ ವಿರುದ್ಧ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News