ದಾವಣಗೆರೆ | ಕಾರು-ಬಸ್ ನಡುವೆ ಢಿಕ್ಕಿ; ಮೂವರು ಮೃತ್ಯು, ಇಬ್ಬರಿಗೆ ಗಾಯ
Update: 2025-04-05 16:54 IST
ದಾವಣಗೆರೆ : ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದ ಸಮೀಪದ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಬೆಳಗಿನಜಾವ ಕಾರು ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಮೂವರು ಸಾವನ್ನಪಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಸಿರುಗುಪ್ಪ ಗ್ರಾಮದ ವಿಜಯ್ ಭಜಂತ್ರಿ (30), ಬಸವರಾಜ ಐಬತ್ತಿ (30) ಹಾಗೂ ಶ್ರೀಧರ ವಡ್ಡರ (27) ಮೃತಪಟ್ಟವರು.
ಗಾಯಗೊಂಡಿರುವ ವಿಶ್ವನಾಥ್ ಈರೇಗೌಡ (30), ರಾಜುಕಾಟಕರ್ (30) ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸ್ನೇಹಿತರು ಪ್ರವಾಸ ಮುಗಿಸಿ ಬೆಳಗಾವಿಗೆ ಕಾರಿನಲ್ಲಿ ಮರಳುತ್ತಿದ್ದ ವೇಳೆ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿಯಾಗಿ ಢಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ಸಿನಲ್ಲಿದ್ದ 11 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಮಾಯಕೊಂಡ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.