ಆರೆಸ್ಸೆಸ್‌ನ ಪ್ರಮುಖ ಶತ್ರು ಸಮಾನತೆಯೇ ಹೊರತು, ಮುಸ್ಲಿಮರಲ್ಲ : ಸಂಸದ ಸಸಿಕಾಂತ್ ಸೆಂಥಿಲ್

ದಾವಣಗೆರೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಶತ್ರು ಸಮಾನತೆಯೇ ಹೊರತು, ಮುಸ್ಲಿಮರಲ್ಲ ಎಂದು ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಆರೋಪಿಸಿದರು.
ಶನಿವಾರ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ರಕ್ಷಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ದಿನಗೂಲಿ ನೌಕರನಾಗಿ ದುಡಿಯುತ್ತಿದ್ದ ಬಾಲಕನೊಬ್ಬ ಐಎಎಸ್ ಅಧಿಕಾರಿಯಾಗಿ, ಸಮಾಜದಲ್ಲಿ ಗೌರವ ಸಂಪಾದಿಸಿದ್ದಾನೆ. ಇದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ್ವೇಷಿಸುತ್ತದೆ” ಎಂದು ಹೇಳಿದರು.
ಸಂವಿಧಾನವನ್ನು ಕುಟುಂಬಕ್ಕೆ ಹೋಲಿಸಿದ ಅವರು, “ನಮ್ಮ ಕುಟುಂಬಕ್ಕೆ ಬೆದರಿಕೆ ಎದುರಾದಾಗ, ನಾವು ಯಾವುದೇ ಬೆಲೆಯನ್ನು ತೆತ್ತಾದರೂ ಹೋರಾಟ ನಡೆಸುತ್ತೇವೆ. ಅದೇ ರೀತಿ ನಾವು ಸಂವಿಧಾನವನ್ನು ರಕ್ಷಿಸಲೂ ಒಗ್ಗಟ್ಟಾಗಬೇಕಿದೆ. ಅದಾಗದಿದ್ದರೆ, ನಾವು 100 ವರ್ಷಗಳಷ್ಟು ಹಿಂದಕ್ಕೆ ತೆರಳುತ್ತೇವೆ. ಹೀಗಾಗಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಪಾಲ್ಗೊಳ್ಳಿ. ಇಲ್ಲವಾದರೆ, ಇದರಿಂದಾಗಿ ಅವರಿಗೆ ಅನ್ಯಾಯವಾಗಲಿದೆ” ಎಂದು ಎಚ್ಚರಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಶತ್ರು ಮುಸ್ಲಿಮರು ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ, ವಾಸ್ತವವಾಗಿ ಸಮಾನತೆ ಅವರ ಶತ್ರುವಾಗಿದೆ ಎಂದೂ ಅವರು ಪ್ರತಿಪಾದಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ದೇಶದ್ರೋಹಿ ಎಂದು ಅವರು, ಅದು ಸಮಾನತೆ ಹಾಗೂ ಅದನ್ನು ಬೆಂಬಲಿಸುವವರನ್ನು ದ್ವೇಷಿಸುತ್ತದೆ. ಯಾರೂ ದೇಶ ಹಾಗೂ ಸಮಾನತೆಯನ್ನು ಪ್ರೀತಿಸುತ್ತಾರೊ, ಅವರೇ ನಿಜವಾದ ಭಾರತೀಯರು. ಸಂವಿಧಾನವನ್ನು ರಕ್ಷಿಸಲು ನಮಗೆ ಧೈರ್ಯದ ಅಗತ್ಯವಿದೆಯೆ ಹೊರತು, ಕೋಪವಲ್ಲ. ಸಂವಿಧಾನದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಲು ನಮಗೆ ದೊಡ್ಡ ಸಮಾವೇಶದ ಅಗತ್ಯವಿದೆ. ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಅವರದನ್ನು ಮುಂದಿನ ದಿನಗಳಲ್ಲೂ ಮಾಡಲಿದ್ದರು. ಆದರೆ, ಸಂವಿಧಾನವನ್ನು ರಕ್ಷಿಸುವುದು ಆಯ್ಕೆಯಲ್ಲ ಬದಲಿಗೆ ಒಂದು ಜವಾಬ್ದಾರಿ” ಎಂದು ಕಿವಿಮಾತು ಹೇಳಿದರು.