ಟ್ರಕ್‌ನಲ್ಲಿದ್ದದ್ದು ಗೋಮಾಂಸ ತ್ಯಾಜ್ಯ ಅಲ್ಲ: ನಟಿ ಐಂದ್ರಿತಾ ರೇ ಅವರ ಆರೋಪಕ್ಕೆ ಡಿಸಿಪಿ ಸ್ಪಷ್ಟನೆ
ಬೆಂಗಳೂರು: ʼʼಟ್ರಕ್ ನಲ್ಲಿ ಗೋಮಾಂಸ ತ್ಯಾಜ್ಯ ಸಾಗಣೆ ಮಾಡಲಾಗುತ್ತಿದೆʼʼ ಎಂಬ ನಟಿ ಐಂದ್ರಿತಾ ರೇ ಅವರ ಆರೋಪವನ್ನು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅಲ್ಲಗಳೆದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ನಟಿ ಐಂದ್ರಿತಾ ರೇ ಹಾಕಿದ್ದ ಪೋಸ್ಟ್ ಬಗ್ಗೆ ಡಿಸಿಪಿ ಸಿ.ಕೆ.ಬಾಬಾ ಪ್ರತಿಕ್ರಿಯಿಸಿದ್ದು, ಅದು ದನದ ಮಾಂಸ ತ್ಯಾಜ್ಯ ಅಲ್ಲ ಎಂದು ತಿಳಿಸಿದ್ದಾರೆ.
ನಟಿ ಐಂದ್ರಿತಾ ರೈ ಅವರು ಗೋಹತ್ಯೆ ಕಾನೂನು ಬಾಹಿರ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬೆಂಗಳೂರು ನಗರ ಪೊಲೀಸ್, ಬೆಂಗಳೂರು ನಗರ ಪೊಲೀಸ್ ಕಮಿಷನರ್, ಬೊಮ್ಮನಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು ಆಗ್ನೆಯ ವಿಭಾಗದ ಡಿಸಿಪಿಗೆ ಎಕ್ಸ್‌ನಲ್ಲಿ ಟ್ಯಾಗ್ ಮಾಡಿದ್ದರು.
ಡಿಸಿಪಿ ಅವರ ಸ್ಪಷ್ಟನೆ ಏನು?
''ಬೊಮ್ಮನಳ್ಳಿಯಲ್ಲಿ ವಾಹನದಲ್ಲಿ ಪತ್ತೆಯಾದ ವಸ್ತುಗಳು ಮೂಳೆಗಳು, ಕೊಂಬುಗಳು, ಚರ್ಮ ಮತ್ತು ಪ್ರಾಣಿಗಳ ಉಪಉತ್ಪನ್ನಗಳು ಹಸುಗಳದ್ದಲ್ಲ ಎಂದು ದೃಢಪಡಿಸಲಾಗಿದೆ. ಪತ್ತೆಯಾದ ತ್ಯಾಜ್ಯ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು'' ಎಂದು ಡಿಸಿಪಿ ಸಿ.ಕೆ.ಬಾಬಾ ಸ್ಪಷ್ಟನೆ ನೀಡಿದ್ದಾರೆ.
ಡಿಸಿಪಿ ಅವರ ಸ್ಪಷ್ಟನೆ ಬೆನ್ನಲ್ಲೇ ನಟಿ ತಮ್ಮ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದಾರೆ.
ಐಂದ್ರಿತಾ ರೇ ಅವರು ಡಿಲಿಟ್ ಮಾಡಿರುವ ಟ್ವೀಟ್