"ನೀವು, ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು": ಬೆಂಗಳೂರು ನಿವಾಸಿಗಳಿಗೆ Zoho ಸಿಇಒ ಶ್ರೀಧರ್ ವೆಂಬು ಸಲಹೆ

Update: 2024-11-16 09:23 GMT

ಸಿಇಒ ಶ್ರೀಧರ್ ವೆಂಬು | PC : X 

ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವವರು ಕನ್ನಡ ಮಾತನಾಡಲು ತಿಳಿದಿರಬೇಕು ಎಂದು ಜೊಹೊ (Zoho)ಸಿಇಒ ಶ್ರೀಧರ್ ವೆಂಬು ಹೇಳಿಕೊಂಡಿದ್ದು, ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಮಾತನಾಡಬೇಕೆಂಬ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ಇತ್ತೀಚೆಗೆ ಎಕ್ಸ್‌ನಲ್ಲಿನ ಪೋಸ್ಟ್‌ ವೊಂದಕ್ಕೆ ಪ್ರತಿಕ್ರಿಯಿಸಿದ ಶ್ರೀಧರ್ ವೆಂಬು, "ಬೆಂಗಳೂರನ್ನು ತಮ್ಮ ವಾಸಸ್ಥಳವನ್ನಾಗಿಸಿಕೊಂಡ ಜನರು ಕನ್ನಡ ಮಾತನಾಡಲು ತಿಳಿದಿರಬೇಕು "ಎಂದು ಪ್ರತಿಕ್ರಿಯಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಮಾತನಾಡದಿರುವುದು

ಅಗೌರವವಾಗಿದೆ.

ಬೆಂಗಳೂರು ಪ್ರವಾಸಕ್ಕೆ ಪರಿಪೂರ್ಣವಾದ ಟೀ ಶರ್ಟ್" ಎಂಬ ಶೀರ್ಷಿಕೆಯೊಂದಿಗೆ "ಹಿಂದಿ ರಾಷ್ಟ್ರೀಯ ಭಾಷೆ" ಎಂದು ಬರೆದಿರುವ ಟೀ-ಶರ್ಟ್ ಧರಿಸಿರುವ ಇಬ್ಬರು ವ್ಯಕ್ತಿಗಳನ್ನು ಒಳಗೊಂಡ ಪೋಸ್ಟ್‌ಗೆ ಪ್ರತಿಕ್ರಿಯಿಸಿದ

ವೆಂಬು, ನೀವು ಬೆಂಗಳೂರನ್ನು ನಿಮ್ಮ ಮನೆಯನ್ನಾಗಿ ಮಾಡಿದರೆ, ನೀವು ಕನ್ನಡವನ್ನು ಕಲಿಯಬೇಕು ಮತ್ತು ನಿಮ್ಮ ಮಕ್ಕಳು ಕನ್ನಡ ಕಲಿಯಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದರೂ ಕನ್ನಡ ಕಲಿಯದಿರುವುದು ಅಗೌರವ. ಬೇರೆ ರಾಜ್ಯಗಳಿಂದ ಚೆನ್ನೈಗೆ ಬರುವ ನಮ್ಮ ಉದ್ಯೋಗಿಗಳಿಗೆ ಇಲ್ಲಿಗೆ ಬಂದ ನಂತರ ತಮಿಳು ಕಲಿಯಲು ಪ್ರಯತ್ನಿಸುವಂತೆ ನಾನು ಯಾವಾಗಲೂ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ವೆಂಬು ಅವರ ಪ್ರತಿಕ್ರಿಯೆಗೆ ಕೆಲವರು ಬೆಂಬಲಿಸಿದರೆ ಇನ್ನು ಕೆಲವರು ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್ ಬಳಕೆದಾರರೋರ್ವರು ಪ್ರತಿಕ್ರಿಯಿಸಿ,

ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ. ನಾನು ಕನ್ನಡ ಕಲಿಯಲು ಹೆಮ್ಮೆಪಡುತ್ತೇನೆ, ರಾಜ್ ಕುಮಾರ್ ಅವರ ಚಲನಚಿತ್ರಗಳನ್ನು ನೋಡುತ್ತೇನೆ ಮತ್ತು ಸಾಧ್ಯವಾದಾಗಲೆಲ್ಲಾ ಕನ್ನಡ ಮಾತನಾಡಲು ಪ್ರಯತ್ನಿಸುತ್ತೇನೆ. 25 ವರ್ಷಗಳು ಕಳೆದಿವೆ ಮತ್ತು ಸ್ವಲ್ಪ ಸ್ವಲ್ಪ ಬರುತ್ತೆ, ಈಗ ಅದು ಗೊತ್ತಿಲ್ಲದಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬ ಬಳಕೆದಾರರು ಶ್ರೀಧರ್ ವೆಂಬು ಮಾತನ್ನು

ಅಪಕ್ವವಾಗಿದೆ ಎಂದು ವಾದಿಸಿದ್ದಾರೆ‌. ಯಾವುದೇ ಭಾಷೆ, ಸಂಸ್ಕೃತಿಗೆ ಅಗೌರವ ತೋರುವುದು ಸ್ವೀಕಾರಾರ್ಹವಲ್ಲ ಆದರೆ ಭಾಷೆಯನ್ನು ಕಲಿಯದಿರುವುದು ಅಗೌರವವೇ? ಅಲ್ಲಿ ವಾಸ್ತವ ಸಾಯುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶ್ರೀಧರ್ ವೆಂಬು ಅವರು ಕ್ಲೌಡ್-ಆಧಾರಿತ ಸಾಫ್ಟ್‌ವೇರ್ ರಚಿಸುವ ಕಂಪನಿಯಾದ ಝೋಹೋ ಸ್ಥಾಪಕ ಮತ್ತು CEO ಆಗಿದ್ದಾರೆ.

ಫೋರ್ಬ್ಸ್ ಪ್ರಕಾರ ಅವರ ಸಂಪತ್ತಿನ ನಿವ್ವಳ ಮೌಲ್ಯವು

5.8 ಶತಕೋಟಿ ಡಾಲರ್ ಇದೆ ಎಂದು ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News