iPhone 15 ಸೀರೀಸ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆ

ಆ್ಯಪಲ್ ಅಧಿಕೃತವಾಗಿ ಸ್ಮಾರ್ಟ್‌ ಫೋನ್ iPhone 15 ಸೀರೀಸ್‌ ಮತ್ತು ಆ್ಯಪಲ್‌ ವಾಚ್‌ ಸೀರಿಸ್ 9 ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಹೊಸ ಆ್ಯಪಲ್‌ ವಾಚ್‌ ಅಲ್ಟ್ರಾ ಮಾದರಿಯನ್ನೂ ಪ್ರದರ್ಶಿಸಿದೆ. ಐಫೋನ್ 15 ಸ್ಮಾರ್ಟ್‌ಫೋನ್, 48 ಮೆಗಾ ಫಿಕ್ಸಲ್ ಕ್ಯಾಮೆರಾ ಹೊಂದಿದೆ. ಹೊಸ ಸ್ಮಾರ್ಟ್ ವಾಚ್ ಉತ್ತಮ ಬ್ಯಾಟರಿ ಬ್ಯಾಕಪ್ ಮತ್ತು ಡಬಲ್ ಟ್ಯಾಪ್ ಫೀಚರ್‌ ನೊಂದಿಗೆ ಗಮನ ಸೆಳೆಯುತ್ತದೆ;

Update: 2023-09-12 23:38 IST
iPhone 15 ಸೀರೀಸ್‌ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆ

PHOTO:twitter.com/theapplehub

  • whatsapp icon

iPhone 15 ಮಾರುಕಟ್ಟೆಗೆ ಬಿಡುಗಡೆ

ಹೊಸದಿಲ್ಲಿ : ಆ್ಯಪಲ್ ಅಧಿಕೃತವಾಗಿ ಸ್ಮಾರ್ಟ್‌ ಫೋನ್ iPhone 15 ಸೀರೀಸ್‌ ಮತ್ತು ಆ್ಯಪಲ್‌ ವಾಚ್‌ ಸೀರಿಸ್ 9 ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಹೊಸ ಆ್ಯಪಲ್‌ ವಾಚ್‌ ಅಲ್ಟ್ರಾ ಮಾದರಿಯನ್ನೂ ಪ್ರದರ್ಶಿಸಿದೆ. ಐಫೋನ್ 15 ಸ್ಮಾರ್ಟ್‌ಫೋನ್, 48 ಮೆಗಾ ಫಿಕ್ಸಲ್ ಕ್ಯಾಮೆರಾ ಹೊಂದಿದೆ. ಹೊಸ ಸ್ಮಾರ್ಟ್ ವಾಚ್ ಉತ್ತಮ ಬ್ಯಾಟರಿ ಬ್ಯಾಕಪ್ ಮತ್ತು ಡಬಲ್ ಟ್ಯಾಪ್ ಫೀಚರ್‌ ನೊಂದಿಗೆ ಗಮನ ಸೆಳೆಯುತ್ತದೆ. ಆ್ಯಪಲ್ ಸ್ಮಾರ್ಟ್‌ ವಾಚ್‌ನಲ್ಲಿ ಚಿಟಿಕೆ ಹೊಡೆಯುವುದರ ಮೂಲಕ ಕರೆ ಸ್ವೀಕರಿಸುವ, ಸಂದೇಶ ಓದುವ, ಫೀಚರ್‌ಗಳನ್ನು ಬದಲಾಯಿಸುವ ಅವಕಾಶ ಗಮನ ಸೆಳೆಯುತ್ತದೆ.

ಹೊಸ iPhone 15 Pro ಮತ್ತು iPhone 15 Pro Max ಕಳೆದ ವರ್ಷದ ಪ್ರೊ ಮಾಡೆಲ್‌ಗಳಂತೆಯೇ ಕಾಣುತ್ತದೆ, ಆದರೆ ಕೆಲವು ಮುಖ್ಯ ಬದಲಾವಣೆಗಳಿವೆ. A17 ಬಯೋನಿಕ್ SoC, ವೇಗದ ವರ್ಗಾವಣೆಯೊಂದಿಗೆ ಚಾರ್ಜ್ ಮಾಡಲು USB-C ಪೋರ್ಟ್, ಟೈಟಾನಿಯಂ ಬಾಡಿ, 6.1-ಇಂಚಿನ ಮತ್ತು 6.7-ಇಂಚಿನ ಡಿಸ್ಪ್ಲೇಗಳು ಹೊಸ ಐಫೋನಿನ ವೈಶಿಷ್ಯಗಳಲ್ಲಿ ಪ್ರಮುಖವಾದವು.

ಆ್ಯಪಲ್ ಪರಿಸರದ ಉಳಿವಿಗೆ ತನ್ನ ಬದ್ಧತೆಯನ್ನು ಹೊಸ ಉತ್ಪನ್ನಗಳ ಮೂಲಕ ಪುನರುಚ್ಚರಿಸಿದೆ. ಕಂಪನಿಯು ಈ ವರ್ಷದಿಂದ ಆ್ಯಪಲ್ ಬಾಕ್ಸ್‌ನಲ್ಲಿ ಹೊಸ ಕಾರ್ಬನ್ ನ್ಯೂಟ್ರಲ್ ಲೋಗೋವನ್ನು ಬಳಸುತ್ತಿದೆ. ಇದಲ್ಲದೆ, ವಾಚ್ ಸರಣಿ 9 ವಾಚ್ ಮರುಬಳಕೆಯ ಅಲ್ಯೂಮಿನಿಯಂ, ಮರುಬಳಕೆಯ ತವರ ಮತ್ತು ತಾಮ್ರವನ್ನು ಬಳಸಿದೆ. ಮೊದಲ ಬಾರಿಗೆ, ಬ್ಯಾಟರಿಯಲ್ಲಿ ಕೋಬಾಲ್ಟ್ ಅನ್ನು ಮರುಬಳಕೆ ಮಾಡಲಾಗಿದೆ.

ಆಪಲ್‌ ಉತ್ಪನ್ನಗಳ ಬುಕಿಂಗ್‌ ಆರಂಭಗೊಂಡಿದ್ದು ಸೆಪ್ಟೆಂಬರ್‌ 22,2023 ರ ವೇಳೆಗೆ ಗ್ರಾಹಕರಿಗೆ ಸಿಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News