ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಮುಖ ಪ್ರಾಯೋಜಕರಾಗಿ ಡ್ರೀಮ್ 11: ಬಿಸಿಸಿಐ ಘೋಷಣೆ

Update: 2023-07-01 11:17 GMT

ಹೊಸದಿಲ್ಲಿ: ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್ ಫಾರ್ಮ್ ಡ್ರೀಮ್ 11 ಅನ್ನು ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕರಾಗಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI),ಶನಿವಾರದಂದು ಹೆಸರಿಸಿದೆ.

ಬೈಜುಸ್ ಕಂಪೆನಿಯ ಗುತ್ತಿಗೆ ಈ ವರ್ಷದ ಆರಂಭದಲ್ಲಿ ಮಾರ್ಚ್ ತಿಂಗಳಲ್ಲಿ ಕೊನೆಗೊಂಡಿದೆ. ಪ್ರಪಂಚದಾದ್ಯಂತದ ಅತ್ಯಂತ ಜನಪ್ರಿಯ ಫ್ಯಾಂಟಸಿ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾದ Dream 11 ಮೂರು ವರ್ಷಗಳ ಅವಧಿಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಜುಲೈ 12 ರಂದು ಡೊಮಿನಿಕಾದ ರೋಸೋವಿನಲ್ಲಿರುವ ವಿಂಡ್ಸರ್ ಪಾರ್ಕ್ ನಲ್ಲಿ ಆರಂಭಿಕ ಟೆಸ್ಟ್ ನೊಂದಿಗೆಪ್ರಾರಂಭವಾಗುವ ವೆಸ್ಟ್ ಇಂಡೀಸ್ ಪ್ರವಾಸದಿಂದ ಟೀಮ್ ಇಂಡಿಯಾದ ಜೆರ್ಸಿಯಲ್ಲಿ Dream11 ವನ್ನು ಕಾಣಬಹುದು.

2019 ರಲ್ಲಿ Byju's ಕಂಪೆನಿಯು Oppo ಬದಲಿಗೆ ರಾಷ್ಟ್ರೀಯ ತಂಡದ ಪ್ರಾಯೋಜಕರನ್ನಾಗಿ ಆಯ್ಕೆಯಾಯಿತು. 2022 ರವರೆಗೆ ಮೂರು ವರ್ಷಗಳವರೆಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ನಂತರ ಲರ್ನಿಂಗ್ ಅಪ್ಲಿಕೇಶನ್ ತನ್ನ ಒಪ್ಪಂದವನ್ನು 2023 ರವರೆಗೆ ವಿಸ್ತರಿಸಿತು,

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News