ಬೀದರ್ | ಮಾದಕಾಂಶಯುಕ್ತ ಔಷಧಗಳ ಅಕ್ರಮ ಮಾರಾಟ: ಇಬ್ಬರ ಬಂಧನ

Update: 2024-12-27 10:02 GMT

ಬೀದರ್: ಮಾದಕ ದ್ರವ್ಯದ ಅಂಶವಿರುವ ಔಷಧಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಗಾಂಧಿಗಂಜ್ ಠಾಣೆಯ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಮಾದಕಾಂಶಯುಕ್ತ ಔಷಧ(ನಾರ್ಕೊಟಿಕ್ ಡ್ರಗ್ಸ್) ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ದಿ. 26ರಂದು ನಗರದ ಹಾರೂರಗೇರಿ-ಲಾಡಗೇರಿ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೇ ಮಾದಕಾಂಶಯುಕ್ತ ಗುಳಿಗೆ ಮತ್ತು ಸಿರಪ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಅನುಸಿರಿಸಿ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಹಾಗೂ ಅವರ ಮನೆಗಳಲ್ಲಿದ್ದ 52,150 ರೂ. ಮತ್ತು 1,29,973 ರೂ. ಮೌಲ್ಯದ ಗುಳಿಗೆ ಮತ್ತು ಸಿರಪ್ಗಳು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಮಹೇಶ್ ಮೇಘಣ್ಣವರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ಚಂದ್ರಕಾಂತ್ ಪೂಜಾರಿ, ಪೊಲೀಸ್ ಉಪಾಧೀಕ್ಷಕರು ಹುಮನಾಬಾದ್ ಜಿ.ಎಸ್ ನ್ಯಾಮೇಗೌಡರ್ ಮಾರ್ಗದರ್ಶನದಲ್ಲಿ ಗಾಂಧಿಗಂಜ್ ಪೊಲೀಸ್ ಠಾಣೆ ಪಿಎಸ್ಸೈ ಹನುಮರೆಡ್ಡೆಪ್ಪ, ಸಹಾಯಕ ಔಷಧ ನಿಯಂತ್ರಕರ ಕಚೇರಿಯ ಎಡಿಸಿ ಧನಂಜಯ್, ಹಾಗೂ ಗಾಂಧಿ ಗಂಜ್ ಪೊಲೀಸ್ ಠಾಣೆಯ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News