ಬೀದರ್ | ಮಹಿಳೆಯರು ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ : ಸುಬ್ಬಣ್ಣ ಕರಕನಳ್ಳಿ
ಬೀದರ್ : ಗ್ರಾಮೀಣ ಭಾಗದ ಮಹಿಳೆಯರು ಕನ್ನಡ ಜಾನಪದ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದುವೀರ ಕನ್ನಡಿಗರ ಸೇನೆಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಅಭಿಪ್ರಾಯಪಟ್ಟರು.
ಗುರುವಾರ ಭಾಲ್ಕಿ ತಾಲ್ಲೂಕಿನ ಚಾಲಕಾಪುರ ಗ್ರಾಮದಲ್ಲಿ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಬಸವಣ್ಣ ಶಿಕ್ಷಣ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸೇವಾ ಸಂಸ್ಥೆಯವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಕನ್ನಡ ಭಾಷೆ ಜಾಗೃತಿ ಸಂಸ್ಕೃತಿಕ ವಿಚಾರ ಸಂಕಿರ್ಣ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಬ್ಬಣ್ಣ ಕರಕನಳ್ಳಿ, ಗ್ರಾಮೀಣ ಭಾಗದಲ್ಲಿ ಕನ್ನಡ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಹಿಳೆಯರು ಮಾಡುತ್ತಿದ್ದಾರೆ. ಸರ್ಕಾರ ಕನ್ನಡ ಶಾಲೆಗಳಿಗೆ ವಿವಿಧ ಯೋಜನೆಗಳು ಅನುಷ್ಠಾನಕ್ಕೆ ತಂದು ಆ ಶಾಲೆಯಲ್ಲಿ ಶಿಕ್ಷಣ ಕಲಿತ ಬಡ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನುಲಿಗೆ ಚಂಡಯ್ಯ ಸಂಘ, ರಾಮಬಾಯಿ ಮಹಿಳಾ ಸಂಘ ಹಾಗೂ ಸಿದ್ದಾರೂಢ ಭಜನೆ ಮಂಡಳಿಯಿಂದ ಭಜನೆ ಹಾಗೂ ಜಾನಪದ ಹಾಡುಗಳು ಹಾಡಲಾಯಿತು. ರಮೇಶ್ ಬಾಬು ಮತ್ತು ರವಿದಾಸ್ ಕಾಂಬ್ಳೆ ಕನ್ನಡ ಹಾಡುಗಳು ಹಾಡಿದರು. ಶಂಕರ್ ಚೋಂಡಿ ಸಂಸ್ಕೃತಿಕ ನಾಟಕ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಶಂಕರನಂದ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ಬಸವರಾಜ್ ಖಂಡ್ರೆ ಅಧ್ಯಕ್ಷತೆ ಸ್ಥಾನ ವಹಿಸಿದ್ದರು. ಶ್ರೀಮಂತ ಕಲ್ಲೂರ್, ಸುದರ್ಶನ್ ರಡ್ಡಿ, ಡಾ. ಗೌತಮ್ ಬಕ್ಕಪ್ಪ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಸುಭಾಸ್ ಕೆನಾಡೆ, ಕನ್ನಡಿಗರ ರಕ್ಷಣೆ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ್ ಭವಾನಿ ಹಾಗೂ ನೂರಾರು ಜಾನಪದ ಕಲಾವಿದರು ಭಾಗವಹಿಸಿದ್ದರು.