ಬೀದರ್ | ಅಮಿತ್ ಶಾ ಹೇಳಿಕೆ ಖಂಡಿಸಿ ಔರಾದ್ ಬಂದ್: ಬಾಗಿಲು ಮುಚ್ಚಿದ ಅಂಗಡಿ ಮುಂಗಟ್ಟುಗಳು, ಸಾರಿಗೆಯಲ್ಲಿ ವ್ಯತ್ಯಯ

Update: 2024-12-27 13:29 GMT

ಬೀದರ್: ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಅವರ ಬಗ್ಗೆ ಅವಮಾನಕರ ಮಾತುಗಳನ್ನಾಡಿರುವುದನ್ನು ಖಂಡಿಸಿ ಡಾ. ಬಿ. ಆರ್ ಅಂಬೇಡ್ಕರ್ ಸ್ವಾಭಿಮಾನಿ ಹೋರಾಟ ಸಮಿತಿಯಿಂದ ಇಂದು ಔರಾದ್ ಪಟ್ಟಣ ಸಂಪೂರ್ಣವಾಗಿ ಬಂದ್ ಮಾಡಲಾಯಿತು.

ಔರಾದ್ ನಗರದಲ್ಲಿ ಬೆಳಿಗ್ಗೆಯಿಂದ ಅಂಗಡಿ ಮಾಲಕರು ಸ್ವಯಂ ಘೋಷಿತವಾಗಿ ತಮ್ಮ ತಮ್ಮ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಟೈರ್ ಗೆ ಹಚ್ಚುವ ಮೂಲಕ ಆಕ್ರೋಶ ಹೊರಹಾಕಿದರು.

ಬಂದ್ ಯಶಸ್ವಿಯಾದ ನಂತರ ಕೊನೆಗೆ ತಹಶೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಡಾ. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ, ಅವರ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಅಂಬೇಡ್ಕರ್ ಅವರನ್ನು ಅವಮಾನಿಸಿ ದೇಶದ್ರೋಹ ಕರ್ತವ್ಯ ಎಸಗಿರುವ ಅವರನ್ನು ಸಚಿವ ಸಂಪುಟದಿಂದ ವಜಾಗೋಳಿಸಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂದಿಸುವಂತೆ ಆಗ್ರಹಿಸಿದರು.

ಔರಾದ್ ಬಂದ್ ಹೋರಾಟದ ನಡುವೆಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಝರೆಪ್ಪಾ ವರ್ಮಾ, ಉಪಾಧ್ಯಕ್ಷ ಗಣಪತರಾವ್ ಶೆಂಬೆಳ್ಳಿ, ಆನಂದ್ ಗಲಗಲೆ, ಸುಭಾಸ್ ಲಾಧಾ, ಬಾಬುರಾವ್ ತಾರೆ, ರಾಮಣ್ಣ ವಡೆಯರ್, ಸುಧಾಕರ್ ಕೊಳ್ಳೂರ್, ಡಾ. ಫಯಾಜ್ ಅಲಿ, ರಹಿಂ ಮೌಲಾನಾ, ಧನರಾಜ್ ಮುಸ್ತಾಪುರ್, ಸತೀಶ್ ವಗ್ಗೆ, ಗೌತಮ್ ಮೇತ್ರೆ, ಸುನಿಲ್ ಮಿತ್ರ, ಶಿವು ಕಾಂಬಳೆ, ರತ್ನದೀಪ್ ಕಸ್ತುರೆ, ವಿನೋದ್ ಡೋಳೆ, ದತ್ತಾತ್ರಿ ಮುಂಗನಾಳಕರ ಹಾಗೂ ಪ್ರಕಾಶ ಅಲ್ಲಾಪುರ್ ಸೇರಿದಂತೆ ಸಾವಿರಾರು ಜನ ಸೇರಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News