ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಸುಧಾರಣೆಗೆ ಟೆಕ್ ಪರಿಹಾರ

Update: 2023-07-15 10:02 GMT

ಮಂಗಳೂರು, ಜು. 15: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆರಹಿತ ಪಾರ್ಕಿಂಗ್ ವ್ಯವಸ್ಥೆಗಾಗಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿಆರ್) ವ್ಯವಸ್ಥೆಯನ್ನು ಪರಿಚಯಿಸಿದೆ.

ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಗಳನ್ನು ಫಾಸ್ಟ್ ಟ್ಯಾಗ್ ಲೇನ್‌ಗಳಾಗಿ ಪರಿವರ್ತಿಸಲು ಕ್ರಮ ವಹಿಸಲಾಗಿದ್ದು, ಪಾರ್ಕಿಂಗ್ ಪೂರ್ವ ಪಾವತಿ ಕೌಂಟರ್‌ನಲ್ಲಿ ಪಾವತಿ ಸೌಲಭ್ಯ ಹಾಗೂ ನಿರ್ಗಮನ ಟೋಲ್ ಬೂತ್‌ಗಳಲ್ಲಿ ಹೆಚ್ಚುವರಿ ಲೇನ್ ರಚಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಎಎನ್‌ಪಿಆರ್ ವ್ಯವಸ್ಥೆಯು ಪ್ರವೇಶ ಬೂತ್‌ಗಳಲ್ಲಿ ವಿಮಾನ ನಿಲ್ದಾಣವನ್ನು ಪ್ರವೇಶಿಸುವ ವಾಹನಗಳ ನಂಬರ್ ಪ್ಲೇಟ್ ಅನ್ನು ಸ್ವಯಂಚಾಲಿತವಾಗಿ ಗುರುತಿಸಿಕೊಂಡು, ವಾಹನವು 1 ನಿಮಿಷದ ಕಡ್ಡಾಯ ಉಚಿತ ಪ್ರಯಾಣದ ಸಮಯದೊಳಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸುವುದಾದರೆ ನಿರ್ಗಮನ ಬೂತ್‌ಗಳಲ್ಲಿನ ಬೂಮ್ ತಡೆಗೋಡೆ ಸ್ವಯಂಚಾಲಿತವಾಗಿ ತೆರೆಯುತ್ತದೆ. ಈ ಸಮಯವನ್ನು ಮೀರಿ ವಾಹನವನ್ನು ನಿಲ್ಲಿಸಬೇಕಾದವರಿಗೆ, ನಿಗದಿತ ಪಾರ್ಕಿಂಗ್ ಶುಲ್ಕವನ್ನು ಪಾವತಿಸುವ ಆಯ್ಕೆ ಇದೆ. ಪಾರ್ಕಿಂಗ್ ಪೂರ್ವ-ಪಾವತಿ ಕೌಂಟರ್ ನಡಿ ಪಾರ್ಕಿಂಗ್ ಶುಲ್ಕವನ್ನು ಪಾವತಿಸಿದರೆ, ಬಳಕೆದಾರರು ನಿರ್ಗಮನ ಬೂತ್ ನಲ್ಲಿ ರಸೀದಿಯನ್ನು ಸ್ಕ್ಯಾನ್ ಮಾಡುವ ಮೂಲಕ ಪಾರ್ಕಿಂಗ್ ಸ್ಥಳದಿಂದ ನಿರ್ಗಮಿಸಲು ಹೆಚ್ಚುವರಿ 1 ನಿಮಿಷದ ಬಫರ್ ಸಮಯವನ್ನು ಪಡೆಯುತ್ತಾರೆ ಎಂದು ವಿಮಾನ ನಿಲ್ದಾಣದ ವಕ್ತಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫಾಸ್ಟ್ಟ್ಯಾಗ್ ಪಾವತಿ ವಿಧಾನವನ್ನು ಆರಿಸಿಕೊಂಡರೆ ಮತ್ತು ಫಾಸ್ಟ್ಟ್ಯಾಗ್ ಲೇನ್ ಮೂಲಕ ವಿಮಾನ ನಿಲ್ದಾಣವನ್ನು ಪ್ರವೇಶಿಸಿದರೆ (ಪ್ರವೇಶದಲ್ಲಿ ಲೇನ್ 2 ಮತ್ತು ನಿರ್ಗಮನದಲ್ಲಿ ಲೇನ್ 3) ಅಂತಹ ಗ್ರಾಹಕರು ತಡೆರಹಿತ ಮಾರ್ಗವನ್ನು ಅನುಭವಿಸಬಹುದು. ವಿಮಾನ ನಿಲ್ದಾಣವು ಎಲ್ಲಾ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಫಾಸ್ಟ್ಯಾಗ್ ತಂತ್ರಜ್ಞಾನದೊಂದಿಗೆ ಒಳಗೊಳ್ಳುವ ಪ್ರಕ್ರಿಯೆಯಲ್ಲಿದೆ ಮತ್ತು ಶೀಘ್ರದಲ್ಲೇ ಈ ಯೋಜನೆಯನ್ನು ಒಟ್ಟಾರೆಯಾಗಿ ಜಾರಿಗೆ ತರಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

ಆಂಬ್ಯುಲೆನ್ಸ್ ಮತ್ತು ಕ್ರ್ಯಾಶ್ ಫೈರ್ ಟೆಂಡರ್ ಗಳಂತಹ ತುರ್ತು ವಾಹನಗಳ ತ್ವರಿತ ಚಲನೆಗೆ ಅನುಕೂಲವಾಗುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ವಿಮಾನ ನಿಲ್ದಾಣವು ಇತ್ತೀಚೆಗೆ ನಿರ್ಗಮನದಲ್ಲಿ ಲೇನ್ ಒಂದರ ಪಕ್ಕದಲ್ಲಿ ಹೆಚ್ಚುವರಿ ತುರ್ತು ಪಥವನ್ನು ತೆರೆದಿದೆ ಎಂದು ಪ್ರಕಟೆಯಲ್ಲಿ ತಿಳಿಸಲಾಗಿದೆ.



 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News