ಬಿಹಾರ | ನಿರ್ಮಾಣ ಹಂತದ ಸೇತುವೆ ಕುಸಿತ

Update: 2024-09-23 13:27 GMT

PC : newindianexpress.com

ಪಾಟ್ನಾ: ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿದೆ. ರವಿವಾರ ರಾತ್ರಿ ನಡೆದಿರುವ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚೆಗೆ ಬಿಹಾರದಲ್ಲಿ ನಡೆದ ಹತ್ತಾರು ಸೇತುವೆ ಕುಸಿತ ಪ್ರಕರಣಗಳ ಬೆನ್ನಿಗೇ ಈ ಸೇತುವೆ ಕುಸಿತದ ಘಟನೆ ನಡೆದಿದೆ.

‘ಬಕ್ತಿಯಾರ್ ಪುರ್-ತಾಜ್ ಪುರ್ ಗಂಗಾ ಮಹಾಸೇತು’ ಸೇತುವೆಯ ಮೇಲುಸ್ತುವಾರಿಯನ್ನು ಬಿಹಾರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವಹಿಸಿಕೊಂಡಿದೆ ಎಂದು ಹೇಳಲಾಗಿದೆ.

ಬಕ್ತಿಯಾರ್ ಪುರ್-ತಾಜ್ ಪುರ್ ಗಂಗಾ ಮಹಾಸೇತು ಗರ್ಡರ್ ನ ಬೇರಿಂಗ್ ಗಳನ್ನು ಬದಲಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಗರ್ಡರ್ ಗಳನ್ನು ಅನ್ನು ಕಂಭದ ಮೇಲಿರಿಸುವಾಗ, ಒಂದು ಗರ್ಡರ್ ಕುಸಿದು ಬಿದ್ದಿದೆ.

ಈ ಸೇತುವೆಯ ನಿರ್ಮಾಣ ಕಾಮಗಾರಿ ಹಲವಾರು ವರ್ಷಗಳಿಂದ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜೂನ್ 2011ರಲ್ಲಿ 5.57 ಕಿಮೀ ಉದ್ದದ ಬಕ್ತಿಯಾರ್ ಪುರ್-ತಾಜ್ ಪುರ್ ಗಂಗಾ ಮಹಾಸೇತುಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಡಿಗಲ್ಲು ಹಾಕಿದ್ದರು. ಈ ಯೋಜನೆಯ ಅಂದಾಜು ವೆಚ್ಚು 1,602.74 ಕೋಟಿ ರೂ. ಆಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News