ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ

Update: 2024-12-23 15:39 GMT

ಶ್ಯಾಮ್ ಬೆನಗಲ್ | PC : PTI 

ಮುಂಬೈ: ಭಾರತೀಯ ಚಲನಚಿತ್ರ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದ ಹಿರಿಯ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಇಂದು ಮುಂಬೈನಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮುಖ್ಯವಾಹಿನಿ ಹಾಗೂ ಕಲಾತ್ಮಕ ಚಿತ್ರಗಳಿಗೆ ಪರ್ಯಾಯವಾಗಿ ಶ್ಯಾಮ್ ಬೆನೆಗಲ್ ನಿರ್ದೇಶಿಸಿದ್ದ ಚಲನಚಿತ್ರಗಳು ತಮ್ಮ ನೈಜತೆ, ಆಳ ಹಾಗೂ ಕಥಾ ನಿರೂಪಣೆಯಲ್ಲಿನ ಉತ್ಕೃಷ್ಟತೆಯಿಂದ ಭಾರಿ ಜನಮನ್ನಣೆಗೆ ಪಾತ್ರವಾಗಿದ್ದವು. ಅವರ ನಿಧನದಿಂದ ಭಾರತೀಯ ಸಿನಿಮಾ ನಿರ್ಮಾಣದ ಒಂದು ಯುಗ ಅಂತ್ಯಗೊಂಡಂತಾಗಿದೆ.

1976ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಶ್ಯಾಮ್ ಬೆನಗಲ್, 1991ರಲ್ಲಿ ಭಾರತೀಯ ಸಿನಿಮಾಗೆ ತಾವು ನೀಡಿದ ಕೊಡುಗೆಯ ಕಾರಣಕ್ಕೆ ಪದ್ಮಭೂಷಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು.

ಅಂಕುರ್ (1973), ನಿಶಾಂತ್ (1975), ಮಂಥನ್ (1976), ಭೂಮಿಕಾ (1977), ಮ್ಯಾಮೊ (1994), ಸರ್ದಾರಿ ಬೇಗಂ (1996) ಹಾಗೂ ಝುಬೇದಾ (2001) ಹಾಗೂ ಮತ್ತಿತರ ಮಹತ್ವದ ಚಲನಚಿತ್ರಗಳನ್ನು ನಿರ್ದೇಶಿಸುವ ಮೂಲಕ ಶ್ಯಾಮ್ ಬೆನಗಲ್ ಖ್ಯಾತಿಯ ತುತ್ತತುದಿ ತಲುಪಿದ್ದರು. ಅವರು ಚಿತ್ರಗಳು ಆಳವಾದ ಸಾಮಾಜಿಕ ನಿರೂಪಣೆ ಹಾಗೂ ಭಾರತೀಯ ಸಮಾಜದ ಪ್ರಸ್ತುತಿಯನ್ನು ಒಳಗೊಂಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News