ತಿಪಟೂರು | ನಿವೇಶನ ರಹಿತರಿಗೆ ವಸತಿ ನೀಡಲು ಡಿಎಸ್ಎಸ್ ಸಂಚಾಲಕ ಜಕ್ಕನಹಳ್ಳಿ ಮೋಹನ್ ಒತ್ತಾಯ

Update: 2025-04-28 10:32 IST
ತಿಪಟೂರು | ನಿವೇಶನ ರಹಿತರಿಗೆ ವಸತಿ ನೀಡಲು ಡಿಎಸ್ಎಸ್ ಸಂಚಾಲಕ ಜಕ್ಕನಹಳ್ಳಿ ಮೋಹನ್ ಒತ್ತಾಯ
  • whatsapp icon

ತಿಪಟೂರು : ಸರಕಾರ ನಿವೇಶನ ರಹಿತರಿಗೆ ನಿವೇಶನ ನೀಡಿ, ಮನೆ ನಿರ್ಮಾಣ ಮಾಡಬೇಕು ಎಂದು ದಸಂಸ ತಾಲೂಕು ಸಮಿತಿ ಅಧ್ಯಕ್ಷ ಜಕ್ಕನಹಳ್ಳಿ ಮೋಹನ್ ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಿವೇಶನ ಹಾಗೂ ವಸತಿ ರಹಿತರ ಸಭೆ ನಡೆಸಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ನಿವೇಶನ ಹಂಚಿಕೆ ಮಾಡದೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿಯಲ್ಲಿವೆ, ಕೆಲವರಂತೂ ಬಾಡಿಗೆ ಮನೆಯಲ್ಲಿ ಜೀವನ ನಡೆಸುವಂತ್ತಾಗಿದೆ ಸರಕಾರ ಕೂಡಲೇ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಿ, ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಸತೀಶ್ ಮಾರನಗೆರೆ ಮಾತನಾಡಿ, ಸರಕಾರ ನಿವೇಶನ ರಹಿತರಿಗೆ ನಿವೇಶನ ನೀಡದೆ ಬಡವರು ನಿರ್ಗತಿಕರನ್ನು ತೀವ್ರತೊಂದರೆಗೆ ಸಿಲುಕಿಸಿದೆ. ಚುನಾವಣೆಯ ವೇಳೆಯಲ್ಲಿ ಸುಳ್ಳು ಭರವಸೆ ನೀಡುವ ಸರಕಾರಗಳು, ಚುನಾವಣೆಯ ನಂತರ ಕೊಟ್ಟಮಾತು ಮರೆಯುತ್ತವೆ. ಕೇವಲ ಅಲೊಂದು ಇಲ್ಲೊಂದು ನಿವೇಶನ ನೀಡಿ ಬಡವರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಮತ್ತಿಹಳ್ಳಿ ಹರೀಶ್ ಗೌಡ, ತಾಲೂಕಿನ ಸಂಚಾಲಕರಾದ ಮೋಹನ್ ಜಕ್ಕನಹಳ್ಳಿ, ಡಿಎಸ್ಎಸ್ ಮುಖಂಡರಾದ ಸತೀಶ್ ಮಾರನಗೆರೆ, ಮುಖಂಡರಾದ ಕೀರ್ತಿ ಹತ್ಯಾಳ್, ಜಗದೀಶ್ ಗಿಣಿಕಿಕೆರೆ, ಪ್ರಭುಸ್ವಾಮಿ ಗಿಣಿಕಿಕೆರೆ, ಕೃಷ್ಣಮೂರ್ತಿ ಗಿಣಿಕಿಕೆರೆ, ಕುಮಾರ್ ಬೈರಾಪುರ, ಸಂಜಯ್ ಗಿಣಿಕಿಕೆರೆ, ಸತೀಶ್ ಪೆದ್ದಿಹಳ್ಳಿ, ತಿಪಟೂರು ನೆಹರು ನಗರ ರಘು, ಮಹಿಳಾ ನಗರ ಸಂಚಾಲಕರಾದ ಭವ್ಯ, ಮಹಿಳಾ ತಾಲೂಕು ಸಂಘಟನಾ ಸಂಚಾಲಕರಾದ ಅಶ್ವಿನಿ, ಹೇಮಾ ಮುಂತಾದವರು ಉಪಸ್ಥಿತರಿದರು

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News