ತುಮಕೂರು | ದಿವ್ಯಾಂಗ ಫಲಾನುಭವಿಗಳಿಗೆ ಸಹಾಯಕ ಸಲಕರಣೆ ವಿತರಿಸಿದ ವಿ.ಸೋಮಣ್ಣ

Update: 2024-12-26 14:21 GMT

ತುಮಕೂರು : ಬಡವನಹಳ್ಳಿ ಹೋಬಳಿ ವ್ಯಾಪ್ತಿಯ 9 ಪಂಚಾಯಿತಿ ಮತ್ತು ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ 6 ಪಂಚಾಯಿತಿ ವ್ಯಾಪ್ತಿಯಲ್ಲಿನ ದಿವ್ಯಾಂಗ ಫಲಾನುಭವಿಗಳಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು  ಸಮಾಜ ಕಲ್ಯಾಣ ಇಲಾಖೆಯ ADIP ಯೋಜನೆಯಡಿಯಲ್ಲಿ ಸಹಾಯಕ ಸಲಕರಣೆಯನ್ನು ವಿತರಿಸಿದರು.

ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರು ಇಂದು(ಗುರುವಾರ) ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು, ಬಡವನಹಳ್ಳಿ ಹೋಬಳಿ ಮತ್ತು ಮಿಡಿಗೇಶಿ ಹೋಬಳಿಗಳ ಪ್ರವಾಸ ಕೈಗೊಂಡಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರ ಆಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಇಲಾಖಾ ಅಧಿಕಾರಿಗಳಿಗೆ ಪರಿಹಾರ ಕ್ರಮಕೈಗೊಳ್ಳಲು ಆದೇಶಿಸಿದರು. ಬೆಳಗ್ಗೆ 10.00 ರಿಂದ 2.00 ಗಂಟೆಯವರೆಗೆ ಬಡವನಹಳ್ಳಿ ಪಂಚಾಯಿತಿ ಆವರಣದಲ್ಲಿ ಆಗಮಿಸಿದ ನೂರಾರು ಸಾರ್ವಜನಿಕರ ಅಹವಾಲುಗಳನ್ನು ಇಲಾಖೆ ಅಧಿಕಾರಿಗಳೊಂದಿಗೆ ಸ್ವೀಕರಿಸಿ, ಕ್ರಮ ಕೈಗೊಳ್ಳುವಂತೆ  ಸೂಚಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News