ತುಮಕೂರು: ಶಾರ್ಟ್ ಸರ್ಕ್ಯೂಟ್ ನಿಂದ 3 ಅಂಗಡಿಗಳು ಬೆಂಕಿಗಾಹುತಿ
Update: 2024-12-16 05:41 GMT
ತುಮಕೂರು. ಡಿ.16: ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದರಿಂದ ಕಾಣಿಸಿಕೊಂಡ ಬೆಂಕಿ ಕಾರಣ ಮೂರು ಅಂಗಡಿ ಮಳಿಗೆಗಳು ಬೆಂಕಿಗೆ ಆಹುತಿಯಾದ ಇಂದು ಮುಂಜಾನೆ ನಗರದ ಬಿ.ಎಚ್. ರಸ್ತೆಯ ತುಮಕೂರು ವಿ.ವಿ.ಮುಂಭಾಗದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ತುಮಕೂರು ವಿ.ವಿ.ಮುಂಭಾಗದಲ್ಲಿರುವ ಮೊಬೈಲ್ ಮಳಿಗೆ, ಹೋಳಿಗೆ ಮನೆ ಹಾಗೂ ಪಕ್ಕದ ತರಕಾರಿ ಅಂಗಡಿಗಳು ಸುಟ್ಟು ಹೋಗಿವೆ.
ಮೊಬೈಲ್ ಮಾರ್ಟ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಮೊದಲು ಬೆಂಕಿ ಕಾಣಿಸಿಕೊಂಡಿದೆ. ನಂತರ ಅಕ್ಕಪಕ್ಕದಲ್ಲಿ ಇರುವ ತರಕಾರಿ ಅಂಗಡಿ ಮತ್ತು ಹೋಳಿಗೆ ಮನೆ ಅಂಗಡಿಗಳಿಗೆ ವ್ಯಾಪಿಸಿದೆ. ಬೆಂಕಿ ಕೆನ್ನಾಲಗೆಗೆ ಅಂಗಡಿಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಸ್ಥಳಕ್ಕೆಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದು, ಇತರ ಅಂಗಡಿ ಮಳಿಗೆಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದಾರೆ.