ಐಟಿ ರೈಡ್ ಹೆಸರಿನಲ್ಲಿ ಮಹಿಳೆಗೆ 12 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
Update: 2024-08-12 15:31 GMT
ಉಡುಪಿ, ಆ.12: ಲಂಡನ್‌ನಿಂದ ಬಂದ ಪಾರ್ಸೆಲ್‌ಗೆ ಐಟಿ ರೈಡ್ ಮಾಡುವುದಾಗಿ ಬೆದರಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಮಿಯ್ಯಾರು ಕುಂಟಿಬೈಲುವಿನ ವಿದ್ಯಾ(38) ಎಂಬವರಿಗೆ ಮಾರ್ಕ್ ಸೀಮಾ ಎಂಬ ಪೇಸ್‌ಬುಕ್ ಖಾತೆಯಲ್ಲಿ ಗೆಳೆಯರಾಗಿದ್ದು, ಬಳಿಕ ಸುನಿತಾ ಕುಮಾರಿ ಎಂಬವರು ಲಂಡನ್‌ನಿಂದ ಚಿನ್ನದ ವಸ್ತು ಮತ್ತು ಪೌಂಡು ಹಣ ಪಾರ್ಸೆಲ್ ಬಂದಿದೆ ಎಂದು ಹೇಳಿ ಅದರ ಕಸ್ಟಮ್ ಶುಲ್ಕ ಹಾಗೂ ಐ.ಟಿ ರೈಡ್ ಮಾಡುವುದಾಗಿ ಬೆದರಿಸಿದ್ದರು.
ಇದರಿಂದ ಹೆದರಿದ ವಿದ್ಯಾ ಹಂತ ಹಂತವಾಗಿ ಅವರ ಖಾತೆಗೆ ಒಟ್ಟು 11,94,490ರೂ. ಹಣವನ್ನು ವರ್ಗಾಯಿಸಿದ್ದರು. ಈ ಮೂಲಕ ವಿದ್ಯಾ ಅವರನ್ನು ವಂಚಿಸಿರುವುದಾಗಿ ದೂರಲಾಗಿದೆ.