ನ.9ರಂದು ಸಾಸ್ತಾನ ಟೋಲ್‌ಗೆ ಮುತ್ತಿಗೆ
ಬ್ರಹ್ಮಾವರ: ಸಂಪೂರ್ಣ ಹದಗೆಟ್ಟಿರುವ ಹೊಂಡ ಗುಂಡಿಗಳಿಂದ ತುಂಬಿರುವ ಹೆದ್ದಾರಿ ಟೋಲ್ ರಸ್ತೆ, ಉರಿಯದ ಬೀದಿ ದೀಪ ಗಳು, ಪಾದಚಾರಿಗಳಿಗೆ ದಾರಿಯ ಸಮಸ್ಯೆ ಹಾಗೂ ಸ್ಥಳೀಯ ವಾಹನಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ನೋಂದಾಯಿಸಿರುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುತ್ತಿರುವುದನ್ನು ಖಂಡಿಸಿ ನ.9ರಂದು ಸಂಜೆ 5 ಗಂಟೆಗೆ ಸಾಸ್ತಾನ ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನಿರ್ಧರಿಸಿದೆ.
ಸಂಸ್ಥೆಯ ಹೆಸರಿನಲ್ಲಿ ನೋಂದಾಯಿತ ವಾಹನಗಳಿಗೆ ಟೋಲ್ ವಿಧಿಸುವ ನೆಪದಲ್ಲಿ ಸ್ಥಳೀಯ ಶಾಲೆಗಳ ವಾಹನಕ್ಕೆ ಹಾಗೂ ಸ್ಥಳೀಯ ಕೆಲವು ಉದ್ಯಮಗಳ ವಾಹನಗಳಿಗೆ ಟೋಲ್ ವಿಧಿಸುವುದರ ಮೂಲಕ ಟೋಲ್ ಕಟ್ಟೆಯವರು ಒಡೆದು ಅಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ನಂತರ ಇದನ್ನೆ ಮುಂದುವರಿಸಿಕೊಂಡು ಕಮರ್ಷಿಯಲ್ ವಾಹನಗಳಿಗೂ ಟೋಲ್ ವಿಧಿಸಲು ಮುಂದಾಗುವ ಸಾಧ್ಯತೆ ಇದ್ದು ಈ ಷಡ್ಯಂತ್ರದ ವಿರುದ್ದ ಧ್ವನಿ ಎತ್ತುವ ನಿಟ್ಟಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.