ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2023-10-21 16:10 GMT

ಸಾಂದರ್ಭಿಕ ಚಿತ್ರ

ಕಾಪು, ಅ.21: ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪಾಂಗಳ ಗ್ರಾಮದ ಮರಿಯಪುರ ಎಂಬಲ್ಲಿ ಅ.21ರಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ಮರಿಯಪುರ ನಿವಾಸಿ ನವೀನ್ ಮಾಬೆನ್ ಎಂಬವರ ಪತ್ನಿ ಮಲ್ಪೆಕೊಳದ ಪ್ರಜ್ವಲ್ ಮರಿಯ(34) ಎಂದು ಗುರುತಿಸಲಾಗಿದೆ. ಇವರು ಫಿಟ್ಸ್ ಖಾಯಿಲೆ ಹಾಗೂ ತಲೆಯ ನರದ ಸಮಸ್ಯೆಯಿಂದ ಬಳಲುತ್ತಿದ್ದು, ಬೆಳಗ್ಗೆ ಪತಿ ಎದ್ದು ನೋಡಿದಾಗ ಪ್ರಜ್ವಲ್ ಮರಿಯ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಅವರ ಮೃತದೇಹವು ಮನೆಯ ಹಿಂಬದಿಯ ಬಾವಿಯಲ್ಲಿ ಪತ್ತೆ ಯಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News